ಪಾಕ್ ಗೆಲುವು 92ರ ವರ್ಲ್ಡ್ ಕಪ್ ಪುನರಾವರ್ತನೆ

360

ಬರ್ಮಿಂಗ್ ಹ್ಯಾಮ್: ಬಾಬರ್ ಅಜಮ್ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಪಾಕ್ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಈ ಮೂಲಕ 1992ರ ಪಾಕ್ ನ ಸ್ಥಿತಿ ಹಾಗೂ ಇದೀಗಿನ ಸ್ಥಿತಿ ಒಂದೆಯಾಗಿದೆ. ಇಲ್ಲಿ 92ರ ವರ್ಲ್ಡ್ ಕಪ್ ಆಟ ಪುನರಾವರ್ತನೆಯಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್ ಪಡೆಗೆ ಅದು ಮುಳುವಾಯ್ತು. ಪಾಕಿಸ್ತಾನದ ಮಾರಕ ಬೌಲಿಂಗ್ ದಾಳಿಗೆ ವಿಲಿಯಮ್ ಸನ್ ಟೀಂ ಪತರುಗುಟ್ಟಿತು. ಹೀಗಾಗಿ ಸತತ ಗೆಲುವಿನ ಫಾರ್ಮ್ ನಲ್ಲಿದ್ದ ನ್ಯೂಜಿಲೆಂಡ್ ಕೇವಲ 237 ರನ್ ಗಳನ್ನ ಮಾತ್ರ ಗಳಿಸಿತು.

ಬಾಬರ್ ಹಾಗೂ ಸೊಹೈಲ್ ಗೆಲುವಿನ ಆಟ

ಈ ಸ್ಕೋರ್ ಚೇಸ್ ಮಾಡಿದ ಸರ್ಫರಾಜ್ ಟೀಂ, ಬಾಬರ್ ಅಜಮ್ ಶತಕ ಹಾಗೂ ಸೊಹೈಲ್ ಅವರ 64 ರನ್ ಗಳ ತಾಳ್ಮೆಯ ಆಟದಿಂದ 6 ವಿಕೆಟ್ ಗಳ ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಆಡಿರುವ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಏಳು ಪಾಯಿಂಟ್ ಗಳಿಸಿರುವ ಪಾಕ್ 6ನೇ ಸ್ಥಾನದಲ್ಲಿದ್ದು ಸೆಮಿಫೈನಲ್ ಆಸೆಯನ್ನ ಜೀವಂತವಾಗಿಟ್ಟುಕೊಂಡಿದೆ.

ಈ ಗೆಲುವು 1992ರಲ್ಲಿ ಪಾಕ್ ನ ಪಾಯಿಂಟ್ ನೆನಪಿಸಿದೆ. ಆಗ್ಲೂ ಸಹ ಪಾಕ್ ಆಡಿದ್ದ 7 ಪಂದ್ಯಗಳಿಂದ 5 ಅಂಕಗಳನ್ನ ಹೊಂದಿತ್ತು. ಅಂದು ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ 7 ಪಾಯಿಂಟ್ ಗಳಿಸಿ ಸೆಮಿಫೈನಲ್ ಆಸೆಯನ್ನ ಜೀವಂತವಾಗಿಟ್ಟುಕೊಂಡಿತ್ತು. ಅದೇ ರೀತಿ ಇದೀಗ ಕೇವಲ 3 ಪಂದ್ಯಗಳನ್ನ ಗೆದ್ದು ಸೆಮಿ ಆಸೆಯನ್ನ ಜೀವಂತವಾಗಿಟ್ಟುಕೊಂಡಿದೆ. ಅತ್ತ ಇಷ್ಟೇ ಅಂಕ ಪಡೆದುಕೊಂಡಿರುವ ಬಾಂಗ್ಲಾಗೆ ಇದು ಟೆನ್ಷನ್ ನೀಡಿದೆ.

ಪಾಯಿಂಟ್ ಪಟ್ಟಿ:


TAG


Leave a Reply

Your email address will not be published. Required fields are marked *

error: Content is protected !!