Search

’45-34′ ಜೋಡಿ ಲವ್ ಕಹಾನಿ…

430

ನಟ ಅರ್ಜುನ ಕಪೂರ್ ಹಾಗೂ ನಟಿ ಮಲೈಕಾ ಅರೋರ್ ನಡುವಿನ ಲವ್ವಿಡವ್ವಿ ಇದೀಗ ಅವರೆ ಒಪ್ಪಿಕೊಂಡಿದ್ದಾರೆ. ಇಂದು ನಟ ಅರ್ಜನ ಕಪೂರ್ 34ನೇ ಹುಟ್ಟು ಹಬ್ಬವಾಗಿದ್ದು, ಈ ಬಗ್ಗೆ ಇನ್ಸಾಟಾಗ್ರಾಮ್ ನಲ್ಲಿ ಮಲೈಕಾ ಪೋಸ್ಟ್ ಮಾಡಿದ್ದಾಳೆ.

ಇನ್ನು ಅರ್ಜುನ ಹಾಗೂ ಮಲೈಕಾ ಜೋಡಿ ನ್ಯೂಯಾರ್ಕ್ ನಲ್ಲಿದ್ದು, ಬರ್ಥ್ ಡೇ ಸೆಲ್ಬ್ರೇಷನ್ ಜೋರಾಗಿ ಮಾಡ್ತಿದೆ. ಇಷ್ಟು ದಿನಗಳ ಇವರಿಬ್ಬರು ಒಟ್ಟಾಗಿ ಓಡಾಡಿಕೊಂಡಿದ್ದು ಬಾಲಿವುಡ್ ಅಂಗಳದ ಮಂದಿಯಲ್ಲ ನೋಡಿದ್ದಾರೆ. ಆದ್ರೆ, ಇದರ ಬಗ್ಗೆ ಮಾತ್ನಾಡಿರ್ಲಿಲ್ಲ. ಸ್ವತಃ ಈ ಜೋಡಿ ತಮ್ಮ ನಡುವಿನ ಸಂಬಂಧದ ಬಗ್ಗೆ ಏನೂ ಹೇಳಿರ್ಲಿಲ್ಲ.

2017ರಿಂದ ಇವರಿಬ್ಬರ ನಡುವೆ ನಂಟು ಬೆಳದಿದೆ. ಮುಂಬೈ ಸೇರಿದಂತೆ ಅನೇಕ ಕಡೆ ಇವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಆದಷ್ಟು ಬೇಗ ಮದುವೆಯಾಗಲಿದೆ ಎನ್ನಲಾಗ್ತಿದೆ. ಆದ್ರೆ, ಈ ಬಗ್ಗೆ ಮಾತ್ನಾಡಿರುವ ನಟ ಅರ್ಜುನ ಕಪೂರ್, ನಾನು ಯಾವುದನ್ನೂ ಮುಚ್ಚಿಡುವುದಿಲ್ಲ. ನನ್ನ ಮದುವೆ ವಿಷಯವನ್ನ ಖಂಡಿತ ನಿಮ್ಗೆಲ್ಲ ಹೇಳುತ್ತೇನೆ ಅಂತಾ ಹೇಳಿದ್ದಾನೆ.

ಮೊದಲ ಪತಿ ಅರ್ಬಾಜ್ ಖಾನ್ ಜೊತೆ

ನಟ ಸಲ್ಮಾನ್ ಖಾನ್ ಸಹೋದರ ನಟ ಅರ್ಬಾಜ್ ಖಾನ್ ಜೊತೆಗೆ 1998ರಲ್ಲಿ ಮದುವೆ ಮಾಡಿಕೊಂಡಿದ್ದ ಮಲೈಕಾ 2017ರಲ್ಲಿ ಇವರಿಬ್ಬರೂ ದೂರವಾಗಿದ್ದಾರೆ. ಇವರಿಗೆ ಆರ್ಯಾನ್ ಖಾನ್ ಅನ್ನೋ ಮಗನಿದ್ದಾನೆ. 45 ವರ್ಷದ ಮಲೈಕಾ 34 ವರ್ಷದ ಅರ್ಜುನ ಸಂಬಂಧ ಹೀಗೆ ಇರುತ್ತಾ, ಮದುವೆ ಮೂಲಕ ಎಲ್ಲದಕ್ಕೂ ತೆರೆ ಎಳೆಯುತ್ತಾರ ಅನ್ನೋ ಕುತೂಹಲವಿದೆ.


TAG


Leave a Reply

Your email address will not be published. Required fields are marked *

error: Content is protected !!