ಜಿ-20 ಶೃಂಗಸಭೆ, ಜಪಾನ್ ತಲುಪಿದ ಮೋದಿ

371

ಜಪಾನ್: ಪ್ರಧಾನಿ ಮೋದಿ ಜಿ-20 ಶೃಂಗಸಭೆಗಾಗಿ ಜಪಾನಿಗೆ ತೆರಳಿದ್ದು, ಓಸ್ಕಾ ತಲುಪಿದ್ದಾರೆ. ಈ ವೇಳೆ ಅವರು ಅಮೆರಿಕಾ ಅಧ್ಯಕ್ಷ ಡೂನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವಾಲ್ಡ್ ಮಿರ್ ಪುಟೀನ್ ಹಾಗೂ ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಜೊತೆ ಮಾತುಕತೆ ನಡೆಸಲಿದ್ದಾರೆ.

ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಾಹಿತಿ ಪ್ರಕಾರ ಪ್ರಧಾನಿ ಮೋದಿ, ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದ ಅನೇಕ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಜಪಾನಿನ ಓಸ್ಕಾದಲ್ಲಿ ಮೂರು ದಿನಗಳ ಕಾಲ ಪ್ರಧಾನಿ ಇರಲಿದ್ದಾರೆ.

ಇನ್ನು ಜಪಾನಿಗೆ ತಲುಪಿರುವ ಮೋದಿಯನ್ನ ಭರ್ಜರಿಯಾಗಿ ಸ್ವಾಗತಿಸಲಾಯ್ತು. ಅಲ್ಲಿರುವ ಭಾರತೀಯರು ಮೋದಿ ಮೋದಿ ಎಂದು ಜಯಘೋಷಗಳನ್ನ ಕೂಗಿದ್ರು. ಇನ್ನು ಪ್ರಧಾನಿ ಮೋದಿಗೆ ಇದು 6ನೇ ಶೃಂಗಸಭೆಯಾಗಿದೆ.


TAG


Leave a Reply

Your email address will not be published. Required fields are marked *

error: Content is protected !!