ನಾಳೆ ಬ್ಲೂ ಬಾಯ್ಸ್ ವರ್ಸಸ್ ಕೆರಿಬಿಯನ್ಸ್

366

ಐಸಿಸಿ ವರ್ಲ್ಡ್ ಕಪ್ ನ 34ನೇ ಪಂದ್ಯ ನಾಳೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯಲಿದೆ. ಬ್ಲೂ ಬಾಯ್ಸ್ ಹಾಗೂ ಕೆರಿಬಿಯನ್ ಪಡೆ ಗೆಲುವಿಗಾಗಿ ನಾಳೆ ಬಿಗ್ ಫೈಟ್ ನಡೆಸಲಿದ್ದಾರೆ.

ವರ್ಲ್ಡ್ ಕಪ್ ನಲ್ಲಿ ಗೆಲುವಿನ ಓಟವನ್ನ ಮುಂದುವರೆಸಿರುವ ವಿರಾಟ್ ಕೊಹ್ಲಿ ಪಡೆ, ತನ್ನ 6ನೇ ಪಂದ್ಯವನ್ನ ವೆಸ್ಟ್ ಇಂಡೀಸ್ ವಿರುದ್ಧ ಆಡ್ತಿದ್ದು, ನಾಳೆ ಮ್ಯಾಂಚೆಸ್ಟರ್ ನ ದಿ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ಸೆಣಸಾಟ ನಡೆಸಲಿದೆ.

ಭಾರತ ಆಡಿರುವ ಐದು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಅಫಘಾನಿಸ್ತಾನ್ ವಿರುದ್ಧ ಜಯ ಗಳಿಸಿದೆ. ನ್ಯೂಜಿಲೆಂಡ್ ಎದುರಿನ ಪಂದ್ಯ ಮಳೆಯಿಂದ ರದ್ದಾಗಿ ಒಟ್ಟು 9 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ ಸೆಮಿಫೈನಲ್ ತಲುಪುವುದು ಪಕ್ಕಾ.

ಇನ್ನು ಹಿಂದಿನ ಪಂದ್ಯದಲ್ಲಿ ಭಾರತ ಸೋಲಿನ ಸಮೀಪ ಬಂದು ಸ್ವಲ್ಪದರಲ್ಲಿಯೇ ಅದರಿಂದ ಪಾರಾಗಿದೆ. ಕ್ರಿಕೆಟ್ ಶಿಶು ಅಂತಾ ಕರೆಸಿಕೊಳ್ಳುವ ಅಫಘಾನಿಸ್ತಾನ್ ಎದುರು ಕೇವಲ 224 ರನ್ ಮಾತ್ರ ಬಾರಿಸಿತ್ತು. ಈ ಸ್ಕೋರ್ ಬೆನ್ನುಹತ್ತಿದ್ದ ಗುಲ್ಬುದ್ದೀನ್ ಪಡೆ ಟೀಂ ಇಂಡಿಯಾಗೆ ಸರಿಯಾಗಿಯೇ ಫೈಟ್ ನೀಡಿತು. ಮಹಮ್ಮದ್ ಶೆಮಿ ಹಾಗೂ ಬೂಮ್ರಾ ಮಾರಕ ಬೌಲಿಂಗ್ ದಾಳಿಯಿಂದಾಗಿ 11 ರನ್ ಗಳ ಅಂತರದಿಂದ ಭಾರತ ಜಯ ಗಳಿಸಿತು. ಹೀಗಾಗಿ ನಾಳಿನ ಪಂದ್ಯದಲ್ಲಿ ದೈತ್ಯ ಆಟಗಾರರ ವಿರುದ್ಧ ಭಾರತ ಹೇಗೆ ಆಡುತ್ತೆ ಅನ್ನೂ ಟೆನ್ಷನ್ ಇಂಡಿಯನ್ ಕ್ರಿಕೆಟ್ ಪ್ರೇಮಿಗಳಲ್ಲಿದೆ.

ಇನ್ನು ಆರು ಪಂದ್ಯಗಳಿಂದ ಕೇವಲ 3 ಪಾಯಿಂಟ್ ಪಡೆದಿರುವ ವೆಸ್ಟ್ ಇಂಡೀಸ್, ಉಳಿದಿರುವ ಮೂರು ಪಂದ್ಯಗಳಲ್ಲಿ ಗೆದ್ದರೂ ಸೆಮಿಫೈನಲ್ ಗೆ ಬರೋ ಚಾನ್ಸ್ ಬಹುತೇಕ ಇಲ್ಲ. ಆಂಡ್ರೂ ರಸಲ್ ಮೊಣಕಾಲು ಗಾಯದಿಂದ ಟೂರ್ನಿಯಿಂದ ಹೊರ ನಡೆದಿದ್ದು, ವೆಸ್ಟ್ ಇಂಡೀಸ್ ಟೀಂಗೆ ಸ್ವಲ್ಪ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಭಾರತೀಯ ಕಾಲಮಾನದ ಪ್ರಕಾರ ನಾಳೆ ಮಧ್ಯಾಹ್ನ 3 ಗಂಟೆಗೆ ಮ್ಯಾಚ್ ಶುರುವಾಗಲಿದೆ.


TAG


Leave a Reply

Your email address will not be published. Required fields are marked *

error: Content is protected !!