ಭಾರತೀಯ ಅಧಿಕಾರಿಗಳನ್ನ ಅವಮಾನಿಸಿದ ಪಾಕ್!

577

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಇಪ್ತಾರ್ ಕೂಟವನ್ನ ಪಾಕ್ ಅಧಿಕಾರಿಗಳು ನಿಲ್ಲಿಸಿದ್ದಾರೆ ಅನ್ನೋದು ಬಹಿರಂಗಗೊಂಡಿದೆ.

ಇಸ್ಲಾಮಾಬಾದ್ ನ ಸೇರಿನಾ ಹೋಟೆಲ್ ನಲ್ಲಿ ಭಾರತೀಯ ಹೈಕಮಿಷನ್ ಕಚೇರಿಯಿಂದ ಇಪ್ತಾರ್ ಕೂಟ ಏರ್ಪಡಿಸಲಾಗಿತ್ತು. ಇದನ್ನ ತಡೆದ ಅಧಿಕಾರಿಗಳು, ಬಂದಿದ್ದ ಅತಿಥಿಗಳನ್ನ ಹೋಟೆಲ್ ನಿಂದ ಹೊರ ಬರಲು ಸೂಚಿಸಿದ್ರಂತೆ. ಅಲ್ದೇ, ಪಾರ್ಟಿಗೆ ಬಂದಿದ್ದ ನೂರಾರು ಅತಿಥಿಗಳಿಗೆ ಕಿರುಕುಳ ನೀಡಿದ್ರು ಅಂತಾ ಹೇಳಲಾಗ್ತಿದೆ.

ಒಂದು ವೇಳೆ ನೀವು ಇಪ್ತಾರ್ ಪಾರ್ಟಿಯಲ್ಲಿ ಭಾಗಿಯಾದ್ರೆ, ಇದರ ಪರಿಣಾಮ ಎದುರಿಸಬೇಕಾಗುತ್ತೆ ಅನ್ನೋ ಬೆದರಿಕೆ ಸಹ ಹಾಕಲಾಗಿದೆಯಂತೆ. ಹೀಗಾಗಿ ಹೋಟೆಲ್ ಗೇಟ್ ಬಳಿ ನಿಂತ ಪಾಕ್ ಅಧಿಕಾರಿಗಳು, ಪಾರ್ಟಿ ರದ್ದು ಮಾಡಲಾಗಿದೆ ಅಂತಾ ಹೇಳಿ ಅಲ್ಲಿದ್ದ ಎಲ್ಲರನ್ನ ಆಚೆ ಕಳುಹಿಸಿದ್ರು ಎನ್ನಲಾಗ್ತಿದೆ.


TAG


Leave a Reply

Your email address will not be published. Required fields are marked *

error: Content is protected !!