ಹಿಂದಿ ಹೇರಿಕೆಯಿಲ್ಲ: ಜಾವೇಡ್ಕರ್

372

ನವದೆಹಲಿ: ಹಿಂದಿ ಭಾಷೆಯನ್ನ ಬಲವಂತವಾಗಿ ಹೇರಿಕೆ ಮಾಡುವ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಶಾಲೆಗಳಲ್ಲಿ ಮೂರು ಭಾಷೆಗಳನ್ನ ತರುವುದರ ಕುರಿತು ಶಿಫಾರಸು ಆಗಿದೆ. ಅದು ಯಾವುದೇ ನೀತಿ ಅಲ್ಲ. ಇಲ್ಲಿ ಯಾವುದೇ ಹೇರಿಕೆ ಇಲ್ಲ.  ಈ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಅಂತಾ ಪ್ರಕಾಶ್ ಜಾವೇಡ್ಕರ್ ಹೇಳಿದ್ದಾರೆ.

ಹೊಸ ಶಿಕ್ಷಣ ನೀತಿ ಪ್ರಕಾರ ಕೇಂದ್ರ ಸರ್ಕಾರ ಶಾಲೆಗಳಲ್ಲಿ ಮೂರು ಭಾಷೆಗಳ ನಿಯಮ ತರಲು ಹೊರಟಿದೆ ಅಂತಾ ಹೇಳಿ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ. ನಮ್ಮಲ್ಲಿ ಎರಡು ಭಾಷೆಗಳ ನೀತಿಯಿದೆ. ಇದ್ರಿಂದಾಗಿ ಹಿಂದಿ ಮಾತ್ನಾಡದ ರಾಜ್ಯಗಳಲ್ಲಿ ಇದರ ಹೇರಿಕೆ ನಡೆಯುತ್ತೆ. ಇದ್ರಿಂದ ಪ್ರತಿಭಟನೆಗೆ ಮುಂದಾಗುತ್ತೇವೆ ಅನ್ನೋ ಎಚ್ಚರಿಕೆ ನೀಡಿದ್ದಾರೆ.

ಈಗಾಗ್ಲೇ ಈ ವಿಚಾರವನ್ನ ಕೈಬಿಡಲಾಗಿದೆ ಅಂತಾ ಈ ಹಿಂದೆ ಹೆಚ್ಆರ್ ಡಿ ಸಚಿವರಾಗಿದ್ದ ಪ್ರಕಾಶ್ ಜಾವೇಡ್ಕರ್ ತಿಳಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!