‘ಹಳ್ಳಿ ಹುಡುಗನಾಗಿದ್ದವನು ರಾಷ್ಟ್ರಪತಿಯಾಗಿದ್ದು ಪ್ರಜಾಪ್ರಭುತ್ವದಿಂದ’

261

ಪ್ರಜಾಸ್ತ್ರ ಸುದ್ದಿ

ಕಾನ್ಪುರ್: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಅವರ ಹುಟ್ಟೂರಿನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಹುಟ್ಟೂರಿಗೆ ಬರ್ತಿದ್ದಂತೆ ಭೂಮಿಗೆ ಬಾಗಿ ನಮಸ್ಕರಿಸಿದರು. ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮಕ್ಕೆ ಭಾನುವಾರ ಮಧ್ಯಾಹ್ನ ಆಗಮಿಸಿದ್ರು.

ಈ ವೇಳೆ ಮಾತ್ನಾಡಿದ ಅವರು, ಕುಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು, ಇಂದು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದೇನೆ ಅಂದರೆ ಅದಕ್ಕೆ ಪ್ರಜಾಪ್ರಭುತ್ವ ಕಾರಣವೆಂದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ, ಸಂವಿಧಾನ ರಚಿಸಿದವರಿಗೆ, ಅವರ  ತ್ಯಾಗ ಬಲಿದಾನಕ್ಕೆ ಶಿರಬಾಗಿ ನಮಸ್ಕರಿಸುತ್ತೇನೆ ಎಂದರು.

ತಮ್ಮ ಬಾಲ್ಯದ ದಿನಗಳನ್ನ ನೆನಪು ಮಾಡಿಕೊಂಡ ರಾಷ್ಟ್ರಪತಿಗಳು, ತಮ್ಮ ಯಶಸ್ಸಿಗೆ ಗ್ರಾಮದ ಜನರ ಪ್ರೀತಿ, ವಿಶ್ವಾಸ, ಆಶೀರ್ವಾದವೇ ಕಾರಣ. ನಾನು ರಾಷ್ಟ್ರಪತಿಯಾಗುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರ್ಲಿಲ್ಲ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!