ಗಾಯಕಿ ಎಸ್.ಲಾಸ್ಯಗೆ ಸೇವಾ ಭೂಷಣ ಪ್ರಶಸ್ತಿ

361

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಪ್ರತಿವರ್ಷ ವಿವಿಧ ಕ್ಷೇತ್ರದ  ಸಾಧಕರಿಗೆ ನೀಡುವ ಸೇವಾ ಭೂಷಣ ಪ್ರಶಸ್ತಿಗೆ ಮೈಸೂರಿನ ಗಾಯಕಿ ಎಸ್.ಲಾಸ್ಯ ಅವರು ಆಯ್ಕೆಯಾಗಿದ್ದಾರೆ. ಮಾರ್ಚ್ 21ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

 ಎಸ್.ಲಾಸ್ಯ ಕಿರು ಪರಿಚಯ:

ಮೈಸೂರು ವಿಶ್ವ ವಿದ್ಯಾಲಯದಲ್ಲಿ ಜೀವರಾಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ 7-8 ವರ್ಷಗಳಿಂದ ಮೈಸೂರು ಸೀಮೆಯಲ್ಲಿ ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು, ಮೈಸೂರು ದಸರಾ, ಸುತ್ತೂರು ಜಾತ್ರೆ, ದರ್ಗಾ ಜಾತ್ರೆ ಸೇರಿದಂತೆ ಹಲವಾರು ಕಡೆ ಜಾನಪದ ಗೀತೆ, ಭಾವಗೀತೆ, ತತ್ವಪದ, ಬುದ್ಧಗೀತೆಗಳನ್ನು ಹಾಡಿ ಜನ ಮೆಚ್ಚುಗೆ ಪಡೆದಿದ್ದಾರೆ.

ನಾಡಿನ ಖ್ಯಾತ ಗಾಯಕ, ಸಂಗೀತ ಸಂಯೋಜಕ ಲಕ್ಷ್ಮಿರಾಮ್ ಅವರ ನೇತೃತ್ವದಲ್ಲಿ ನಡೆದ ಪದವ ಹೇಳೋ ನಾಲಿಗೆಗೆ ಒಲಿದು ಬಾಪ್ಪ ಧರ್ಮ ಗುರುವೇ, ಜನಪದ ಪದಪಯಣ, ಹೊಸ ವರ್ಷಕೆ ಹೊಸಹಾಡು, ಕವಿ ಕಾವ್ಯ ಗಾನ ಯಾನ, ಜಗನಡೆಯಲಿ ಬುದ್ಧನ ಕಡೆ ಸೇರಿ ಮುಂತಾದ ಕಾರ್ಯಕ್ರಮಗಳಲ್ಲಿ ಪ್ರಧಾನ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!