ಅಸಮಾನತೆ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತಬೇಕು: ರಾಷ್ಟ್ರಪತಿ ಕೋವಿಂದ್

206

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶವನ್ನುದ್ದೇಶಿ ತಮ್ಮ ಅವಧಿಯ ಕೊನೆಯ ಭಾಷಣ ಮಾಡಿದ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅಸಮಾನತೆ ವಿರುದ್ಧ ದೇಶದ ಪ್ರತಿಯೊಬ್ಬರು ಧ್ವನಿ ಎತ್ತಬೇಕು ಎಂದರು. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಾಂಧಿ ತತ್ವಗಳ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದರು.

ದೇಶದ ಜನರ ಪರಿಸ್ಥಿತಿ ಸುಧಾರಿಸಲು ನಾವು ಶ್ರಮಿಸಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಹಮ್ಮೆ ಪಡಬೇಕು. ಇದಕ್ಕೆ ಕಾರಣರಾದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸದಾ ಸ್ಮರಿಸಬೇಕು. ಹೀಗಾಗಿ ಯುವಕರು ಸರಿಯಾದ ಮಾರ್ಗದಲ್ಲಿ ಸಾಗಬೇಕಿದೆ. ಐದು ವರ್ಷಗಳ ಹಿಂದೆ ಚುನಾಯಿತ ಪ್ರತಿನಿಧಿಗಳ ಮೂಲಕ ನಾನು ರಾಷ್ಟ್ರಪತಿಯಾದೆ. ಇಂದು ನನ್ನ ಅಧಿಕಾರ ಮುಕ್ತಾಯವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.




Leave a Reply

Your email address will not be published. Required fields are marked *

error: Content is protected !!