ಸಂಸತ್ ಅಧಿವೇಶನ: ವಿಪಕ್ಷಗಳ ಬಳಿಯಿವೆ ಈ ಅಸ್ತ್ರಗಳು!

128

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇಂದಿನಿಂದ ಆಗಸ್ಟ್ 11ರ ತನಕ 17 ದಿನಗಳ ಕಾಲ ಮುಂಗಾರು ಸಂಸತ್ ಅಧಿವೇಶನ ನಡೆಯಲಿದೆ. ಆಡಳಿತರೂಢ ಪಕ್ಷದ ವಿರುದ್ಧ ಮಹಾ ಅಸ್ತ್ರಗಳನ್ನು ಬಿಡಲು ವಿಪಕ್ಷಗಳು ಸಜ್ಜಾಗಿವೆ. ಹೀಗಾಗಿ ಇಂದಿನಿಂದ ಸಂಸತ್ ನಲ್ಲಿ ಕಾವೇರಿದ ಚರ್ಚೆಗಳು, ವಾಗ್ವಾದ, ಪ್ರತಿಭಟನೆ ನಡೆಯಲಿವೆ.

ನಿರುದ್ಯೋಗ, ಬೆಲೆ ಏರಿಕೆ, ಮಣಿಪುರ ಹಿಂಸಾಚಾರ, ಚೀನಾ ಗಡಿ ವಿವಾದ ಸೇರಿದಂತೆ ಹಲವು ಅಸ್ತ್ರುಗಳು ವಿಪಕ್ಷಗಳ ಬಳಿಯಿವೆ. ಬಹುತೇಕ ವಿಚಾರಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಬೆವರಿಳಿಸಲು ಯುಪಿಎ ಪಡೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಜನಾಂಗಿಯ ಹಿಂಸಾಚರದಲ್ಲಿ ಅಕ್ಷರಶಃ ನಲುಗಿ ಹೋಗಿರುವ ಮಣಿಪುರದ ಬಗ್ಗೆ ಸಂಸತ್ತಿನಲ್ಲಾದರೂ ಪ್ರಧಾನಿ ಮೋದಿ ಅವರು ಮಾತನಾಡುವ ಮೂಲಕ ತಮ್ಮ ಮೌನ ಮುರಿಯಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಹಲವು ಜೀವಗಳು ಬಲಿಯಾಗಿವೆ. ಮಹಿಳೆಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬೆತ್ತಲೆ ಮೆರವಣಿಗೆ ನಡೆಸಲಾಗಿದೆ. ಇಷ್ಟಾದರೂ ಮಾತನಾಡಿದ ಪ್ರಧಾನಿ ಮೋದಿ ಬಗ್ಗೆ ವಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿವೆ.

ಹಳೆಯ ಸಂಸತ್ ಕಟ್ಟಡದಲ್ಲಿ ಅಧಿವೇಶನ ನಡೆಯಲಿದೆ. ಕೊನೆಯ ಸಮಾರೋಪದ ಅಧಿವೇಶನ ಮೇನಲ್ಲಿ ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!