2 ವರ್ಷದಲ್ಲೇ ಪೆಟ್ರೋಲ್, ಡೀಸೆಲ್ ದಾಖಲೆ ಏರಿಕೆ

332

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಸತತವಾಗಿ ಕಳೆದ 15 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗ್ತಿದೆ. ಹೀಗಾಗಿ ಕಳೆದ ಎರಡು ವರ್ಷಗಳಲ್ಲೇ ದಾಖಲೆಯ ಏರಿಕೆ ಕಂಡಿದೆ. ಇಂದು ಬೆಳಗ್ಗೆಯಿಂದ ಪೆಟ್ರೋಲ್ 60 ಪೈಸೆ ಹಾಗೂ ಡೀಸೆಲ್ 30 ಪೈಸೆ ಏರಿಕೆ ಮಾಡಲಾಗಿದೆ.

ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ 79.33 ರೂಪಾಯಿ ಇದೆ. ಡೀಸೆಲ್ 78.88 ರೂಪಾಯಿ ಆಗಿದೆ. ಕಳೆದ 15 ದಿನಗಳಿಂದ ಏರಿಕೆ ಕಾಣ್ತಿರುವ ದರದಿಂದಾಗಿ ಪೆಟ್ರೋಲ್ 8.88 ರೂಪಾಯಿ ಹಾಗೂ ಡೀಸೆಲ್ 7.97 ರೂಪಾಯಿ ಏರಿಕೆಯಾಗಿದೆ. ಇದು 2 ವರ್ಷಗಳಲ್ಲೇ ದಾಖಲೆಯ ಏರಿಕೆ ಕಂಡಿದೆ. ಮೊದಲೇ ಲಾಕ್ ಡೌನ್ ನಿಂದ ಹೈರಾಣಾಗಿ ಹೋದ ಜನಕ್ಕೆ ಹಂತ ಹಂತವಾಗಿ ಜೇಬಿಗೆ ಕತ್ತರಿ ಬೀಳ್ತಿದೆ.




Leave a Reply

Your email address will not be published. Required fields are marked *

error: Content is protected !!