1 ಲೀಟರ್ ಪೆಟ್ರೋಲ್ 99.55 ರೂಪಾಯಿ

369

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗ್ತಿದೆ. ಗ್ಯಾಸ್, ಅಡುಗೆ ಎಣ್ಣೆ, ಗೃಹ ಬಳಕೆ ವಸ್ತುಗಳು, ಮಾತ್ರೆ, ಔಷಧಿ ಸೇರಿದಂತೆ ಎಲ್ಲದರ ಬೆಲೆ ಗಗನಕ್ಕೆ ಏರುತ್ತಿದ್ದು, ಜನ ಸಾಮಾನ್ಯರ ಬದುಕು ದುಸ್ಥರವಾಗಿದೆ. ಅದರಲ್ಲೂ ಪೆಟ್ರೋಲ್ ಪೈಪೋಟಿ ಮೇಲೆ ಏರಿಕೆಯಾಗುತ್ತಿದೆ.

ಒಂದು ಲೀಟರ್ ಪೆಟ್ರೋಲ್ ಬೆಲೆ ಇದೀಗ 99.55 ರೂಪಾಯಿ, ಡೀಸೆಲ್ 88.50 ರೂಪಾಯಿ ಆಗಿದೆ. ಇದ್ರಿಂದಾಗಿ ಜನಸಾಮಾನ್ಯರು ಗಾಡಿಗಳನ್ನ ಓಡಿಸುವುದಾ ಬೇಡ್ವಾ ಅನ್ನೋ ಚಿಂತೆಯಲ್ಲಿದ್ದಾರೆ. ವಿ ಪವರ್ ಪೆಟ್ರೋಲ್ 13.4 ಹಾಗೂ ಡೀಸೆಲ್ 5.49 ರೂಪಾಯಿ ಏರಿಕೆಯಾಗಿದೆ. ಎನ್ ಡಿಎ ಸರ್ಕಾರ 2ನೇ ಬಾರಿಗೆ ಅಧಿಕಾರಕ್ಕೆ ಬಂದ್ರೂ ದೇಶದ ಬಡವ, ಮಧ್ಯಮ ವರ್ಗದ ಬದುಕು ಹಸನಾಗ್ಲಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!