131 ರನ್ ಮುನ್ನಡೆ ಸಾಧಿಸಿದ ಭಾರತ

278

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೆಲ್ಬರ್ನ್: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಭಾರತ 131 ರನ್ ಗಳ ಮುನ್ನಡೆ ಸಾಧಿಸಿದೆ. 326ಕ್ಕೆ ಆಲೌಟ್ ಆಗುವ ಮೂಲಕ ಪ್ರಥಮ ಇನ್ನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ. ಇದಕ್ಕೆ ಕಾರಣವಾಗಿದ್ದು ಕ್ಯಾಪ್ಟನ್ ರಹಾನೆ 112 ರನ್ ಹಾಗೂ ಆಲ್ ರೌಂಡರ್ ಜಡೇಜಾ 57 ರನ್ ಗಳ ಕೊಡುಗೆ.

ಕೆಳ ಹಂತದಲ್ಲಿ ಯಾರೂ ಆಡದ ಪರಿಣಾಮ 326ಕ್ಕೆ ಎಲ್ಲ ವಿಕೆಟ್ ಕಳೆದುಕೊಳ್ಳಬೇಕಾಯ್ತು. ಅಶ್ವಿನ್ 14, ಉಮೇಶ ಯಾದವ 9, ಬೂಮ್ರಾ 0, ಮಹಮ್ಮದ್ ಸಿರಾಜ್ 0 ರನ್ ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ರು.

ಆಸ್ಟ್ರೇಲಿಯಾ ಪರ ಸ್ಟ್ರಾಕ್ ಹಾಗೂ ಲೇಯಾನ್ ತಲಾ 3 ವಿಕೆಟ್ ಪಡೆದು ಮಿಂಚಿದ್ರು. ಕಮಿನ್ಸ್ 2, ಹಝಲ್ ವುಡ್ 1 ವಿಕೆಟ್ ಪಡೆದ್ರು. ಈಗಾಗ್ಲೇ ಆಸೀಸ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು 60 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಯಾದವ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!