ಕ್ಯಾಪ್ಟನ್ ರಹಾನೆ ಶತಕ

262

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಅಜಿಂಕ್ಯ ರಹಾನೆ ಭರ್ಜರಿ ಶತಕ ಬಾರಿಸಿದ್ದಾರೆ. 197 ಬೌಲ್ ಗಳಲ್ಲಿ ಶತಕ ಕಂಪ್ಲೀಟ್ ಮಾಡಿದ್ದಾರೆ. ಇದರಲ್ಲಿ 14 ಬೌಂಡರಿಗಳಿವೆ. ಇದು ರಹಾನೆ ಟೆಸ್ಟ್ ನಲ್ಲಿ 12ನೇ ಶತಕವಾಗಿದೆ. ಈ ಮೂಲಕ ಭಾರತದ ರನ್ ಕುಸಿತಕ್ಕೆ ಬ್ರೇಕ್ ಹಾಕಿದ್ದಾರೆ.

2ನೇ ದಿನದ 3ನೇ ವಿರಾಮದ ಅಂತ್ಯಕ್ಕೆ 268 ರನ್ ಗಳಿಗೆ 5 ವಿಕೆಟ್ ಗಳು ಬಿದ್ದಿವೆ. ರಹಾನೆ 100, ರವೀಂದ್ರ ಜಡೇಜಾ 36 ರನ್ ಬಾರಿಸಿ ನಾಟ್ ಔಟ್ ಆಗಿ ಉಳಿದಿದ್ದಾರೆ. ಹೀಗಾಗಿ 73 ರನ್ ಗಳ ಮುನ್ನಡೆ ಸಾಧಿಸಲಾಗಿದೆ. ಮಯಾಂಕ್ 0, ಗಿಲ್ 45, ಪೂಜಾರ 17, ವಿಹಾರಿ 21, ಪಂಥ್ 29 ರನ್ ಬಾರಿಸಿ ಔಟ್ ಆಗಿದ್ದಾರೆ.

ಆಸ್ಟ್ರೇಲಿಯಾ ಪರ ಕಮಿನ್ಸ್, ಸ್ಟಾರ್ಟ್ ತಲಾ 2 ವಿಕೆಟ್ ಪಡೆದಿದ್ದಾರೆ. ಲೇಯಾನ್ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!