ಮೋದಿ ಜೊತೆ ವೇದಿಕೆಯಲಿಲ್ಲ ಶೆಟ್ಟರಗೆ ಸ್ಥಾನ!

184

ಪ್ರಜಾಸ್ತ್ರ ಸುದ್ದಿ

ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ ಅನ್ನೋ ಮಾತುಗಳು ಶುರುವಾಗಿವೆ. ಕಾರಣ, ಜನವರಿ 12ರಿಂದ ನಡೆಯಲಿರುವ ಯವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಹೀಗಾಗಿ ವೇದಿಕೆ ಮೇಲೆ ಯಾರೆಲ್ಲ ಇರಬೇಕು ಅನ್ನೋ ಪಟ್ಟಿ ಸಿದ್ಧವಾಗಿದೆ. ಅದರಲ್ಲಿ ಮಾಜಿ ಸಿಎಂ, ಸ್ಥಳೀಯ ನಾಯಕ ಶೆಟ್ಟರ್ ಅವರ ಹೆಸರನ್ನು ಕೈ ಬಿಡಲಾಗಿದೆಯಂತೆ.

ನಾಳೆ ಹುಬ್ಬಳ್ಳಿಯ ಕುಸಗಲ್ ಹತ್ತಿರದ ರೈಲ್ವೆ ಮೈದಾನದಲ್ಲಿ ಯವಜನೋತ್ಸವಕ್ಕೆ ಚಾಲನೆ ಸಿಗಲಿದೆ. ಈ ವೇಳೆ ಪ್ರಧಾನಿ ಮೋದಿಯೊಂದಿಗೆ ಸಿಎಂ ಬೊಮ್ಮಾಯಿ, ರಾಜ್ಯಪಾಲ ಗೆಹ್ಲೋಟ್, ಕೇಂದ್ರ ಸಚಿವರಾದ ಜೋಶಿ, ಅನುರಾಗ್ ಠಾಕೂರ್, ನಿಸಿಥ್ ಪ್ರಾಮಾಣಿಕ್, ವಿಧಾನ ಪರಿಷತ್ ಸಭಾಪತಿ ಹೊರಟ್ಟಿ, ರಾಜ್ಯ ಸಚಿವರಾದ ಹಾಲಪ್ಪ ಆಚಾರ್, ಶಂಕರ್ ಮುನೇನಕೊಪ್ಪ, ಕೆ.ಸಿ ನಾರಾಯಣಗೌಡ ವೇದಿಕೆ ಹಂಚಿಕೊಳ್ಳಲಿದ್ದಾರೆ. ಆದರೆ, ಜಗದೀಶ್ ಶೆಟ್ಟರ್ ಅವರ ಕ್ಷೇತ್ರದಲ್ಲೇ ಕಾರ್ಯಕ್ರಮ ನಡೆಯುತ್ತಿದ್ದರೂ ಮಾಜಿ ಸಿಎಂ ಆಗಿದ್ದರೂ ವೇದಿಕೆ ಮೇಲೆ ಸ್ಥಾನ ಕಲ್ಪಿಸಿಲ್ಲ ಅನ್ನೋದು ಚರ್ಚೆಯಾಗುತ್ತಿದೆ.

ಈ ಹಿಂದೆ ಮಹಾನಗರ ಪಾಲಿಕೆ ವತಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಮಾಡಲಾಯಿತು. ಆಗಲೂ ಸಹ ಶೆಟ್ಟರ್ ಅವರ ಹೆಸರು ಕೈ ಬಿಡಲಾಗಿತ್ತು. ನಂತರ ವೇದಿಕೆ ಮೇಲೆ ಸ್ಥಾನ ಕಲ್ಪಿಸಲಾಯಿತು. ಈಗ ಪ್ರಧಾನಿ ಆಗಮನದ ವೇಳೆಯೂ ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!