ಗ್ರೀನ್ ಝೋನ್ ಹಾವೇರಿಯಲ್ಲಿ ಮೊದಲ ಕೇಸ್

332

ಹಾವೇರಿ: ಗ್ರೀನ್ ಝೋನ್ ನಲ್ಲಿದ್ದ ಹಾವೇರಿಯಲ್ಲಿ ಇಂದು ಮೊದಲ ಕರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಮುಂಬೈನಿಂದ ಬಂದಿಂದ ವ್ಯಕ್ತಿಯೊಬ್ಬನಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ.

ಏಪ್ರಿಲ್ 29ರಂದು ಮುಂಬೈನಿಂದ ಸವಣೂರಿಗೆ ಬಂದಿದ್ದ 32 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನಿಬ್ಬರ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಮಾತ್ನಾಡಿರುವ ಜಿಲ್ಲಾಧಿಕಾರಿ, ಈ ವ್ಯಕ್ತಿಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಉಸಿರಾಟದ ಸಮಸ್ಯೆಯೂ ಇರಲಿಲ್ಲ. ಮುಂಬೈನಿಂದ ಬಂದಿದ್ದ ಅನ್ನೋ ಕಾರಣಕ್ಕೆ ಪರೀಕ್ಷೆ ಮಾಡಿದಾಗ ಕರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!