3,800 ಕೋಟಿಯ 8 ಯೋಜನೆಗಳಿಗೆ ಪ್ರಧಾನಿ ಚಾಲನೆ

189

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಇಲ್ಲಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 3,800 ಕೋಟಿಯ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಬಹುಕೋಟಿ ವೆಚ್ಚದ 8 ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು.

ಸಮುದ್ರ ನೀರಿನ ನಿರ್ಲವಣೀಕರಣ ಘಟಕ 677 ಕೋಟಿ, ಬಿಎಸ್ 6 ಉನ್ನತೀಕರಣ ಯೋಜನೆ, ಬಿಎಸ್ 6 ಶ್ರೇಣಿಯ ಇಂಧನಗಳ ಉತ್ಪಾದನೆ ಯೋಜನೆಯ ವೆಚ್ಚ 1, 829 ಕೋಟಿ ರೂಪಾಯಿ. ಕಂಟೇನರ್ ಗಳು ಮತ್ತು ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರಿಕರಣಕ್ಕಾಗಿ  281 ಕೋಟಿ ರೂಪಾಯಿ.

 500 ಕೋಟಿ ವೆಚ್ಚದಲ್ಲಿ ಸಮಗ್ರ ಎಲ್ ಪಿಜಿ ಮತ್ತು ಬೃಹತ್ ಪಿಒಎಲ್ ಸೌಲಭ್ಯ ಯೋಜನೆ, ಎನ್ ಎಂಪಿಯಲ್ಲಿ ಶೇಖರಣಾ ಟ್ಯಾಂಕರ್ ಗಳು ಮತ್ತು ಖಾದ್ಯ ತೈಲ ಸಂಸ್ಕರಣಗಾರ ನಿರ್ಮಾಣಕ್ಕಾಗಿ 100 ಕೋಟಿ ರೂಪಾಯಿ, 191.51 ಕೋಟಿ ರೂಪಾಯಿ ವೆಚ್ಚದಲ್ಲಿ  ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ. ಹೀಗೆ 8 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಸಮುದ್ರ ಸೇವೆಯು ಬಹುದೊಡ್ಡ ಶಕ್ತಿಯಾಗಿದೆ. ಅದು ರಾಷ್ಟ್ರದ ರಕ್ಷಣೆಯಾಗಿರಬಹುದು, ಆರ್ಥಿಕ ಶಕ್ತಿಯಾಗಿರಬಹುದು. ಇದಕ್ಕೂ ಮೊದಲು ಕೊಚ್ಚಿಯಲ್ಲಿ ಸ್ವದೇಶಿ ನಿರ್ಮಿತ ಏರ್ ಕಾರ್ಪ್ಟ್ ಗೆ ಚಾಲನೆ ನೀಡಲಾಯಿತು ಎಂದರು.

ಕಳೆದ 8 ವರ್ಷಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ದುಪ್ಪಟವಾಗಿದೆ. ಉತ್ಪಾದನೆಯಲ್ಲಿ ಬಹುದೊಡ್ಡ ಸಾಧನೆಯಾಗಿದೆ. ರಸ್ತೆ ನಿರ್ಮಾಣ, ಅದರಲ್ಲೂ ಕರಾವಳಿ ಭಾಗದಲ್ಲಿ ರಸ್ತೆ ನಿರ್ಮಾಣದ ಮೂಲಕ ಸಮುದ್ರಯಾನದೊಂದಗಿನ ಚಟುವಟಿಕೆ ಹೆಚ್ಚಾಗಿದೆ ಎಂದರು.

ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಸಂಸದರು, ಸಚಿವರು, ಶಾಸಕರು ಉಪಸ್ಥಿತರಿದ್ದರು. ಈ ವೇಳೆ ಪ್ರಧಾನಿಗೆ ಶ್ರೀಕೃಷ್ಣ ಹಾಗೂ ಪರಶುರಾಮನ ವಿಗ್ರಹಗಳನ್ನು ಉಡುಗರೆಯಾಗಿ ನೀಡಲಾಯಿತು.




Leave a Reply

Your email address will not be published. Required fields are marked *

error: Content is protected !!