ಅನ್ ಲಾಕ್ ಇಂಡಿಯಾ: ಮೋದಿ ಹೇಳಿದ್ದೇನು?

376

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ವೈರಾಣು ಕುರಿತಂತೆ ಪ್ರಧಾನಿ ಮೋದಿ ಎರಡು ದಿನಗಳಿಂದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಲಾಕ್ ಡೌನ್ ಇಂಡಿಯಾ ಅಲ್ಲ ಅನ್ ಲಾಕ್ ಇಂಡಿಯಾ ಬಗ್ಗೆ ಮಾತ್ನಾಡಿದ್ದಾರೆ.

ದೊಡ್ಡ ದೊಡ್ಡ ರಾಜ್ಯ, ನಗರಗಳಲ್ಲಿ ಕರೋನಾ ಹರಡುವಿಕೆ ಬಗ್ಗೆ ಗಮನಿಸ್ತಿದ್ದೇನೆ. ಇದರ ಜೊತೆಗೆ ಇಲ್ಲಿನ ಜನರು, ಕರೋನಾ ವಾರಿಯರ್ಸ್ ತಾಳ್ಮೆ, ಜವಾಬ್ದಾರಿ, ಆಡಳಿತ ವೈಖರಿಯಿಂದ ನಿಯಂತ್ರಣದಲ್ಲಿಡಲಾಗಿದೆ ಎಂದಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಜನರು ತೋರಿಸಿದ ಕಟ್ಟುನಿಟ್ಟಿನ ಶಿಸ್ತಿನಿಂದಾಗಿ ಸೋಂಕು ಹೆಚ್ಚಾಗಿ ಹರಡುವುದನ್ನ ತಪ್ಪಿಸಲಾಗಿದೆ ಅಂತಾ ಹೇಳಿದ್ರು.

ದೇಶಿ ಪಿಪಿಇಗಳ ಬಳಕೆ, ಪೀಡಿತರನ್ನ ಬಹುಬೇಗ ಪತ್ತೆ ಹಚ್ಚುವುದು, ಸಧ್ಯ ಇರುವ ಪರೀಕ್ಷಾ ಸಾಮಾರ್ಥ್ಯವನ್ನ ಸಂಪೂರ್ಣ ಬಳಕೆ, ಹಿರಿಯ ವೈದ್ಯರ ತಂಡ ರಚಿಸುವುದು, ಸಹಾಯವಾಣಿಗಳ ಮೂಲಕ ಸರಿಯಾದ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡುವುದು, ಯುವ ಸ್ವಯಂ ಸೇವಕರ ತಂಡವನ್ನ ಬಳಸಿಕೊಳ್ಳುವುದು ಸೇರಿದಂತೆ ಕರೋನಾ ಹೋರಾಟದಲ್ಲಿ ಜನರ ಭಾಗವಹಿಸುವಿಕೆ ಬಗ್ಗೆ ಪ್ರಧಾನಿ ಮೋದಿ ಮಾತ್ನಾಡಿದ್ರು. ಅಲ್ದೇ, ಲಾಕ್ ಡೌನ್ ಮುಂದುವರೆಯುವುದಲ್ಲ. ಅನ್ ಲಾಕ್ ಕುರಿತು ಚರ್ಚೆ ನಡೆಸಿದ್ರು.

ಈ ವೇಳೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಹರಿಯಾಣ, ಒಡಿಶಾ, ಜಮ್ಮು ಕಾಶ್ಮೀರ ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!