ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆ ಇದೀಗ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಪೊಲೀಸ್ ಇಲಾಖೆಯ ಶ್ರೇಣಿವಾರು ಹುದ್ದೆಯ ಹೆಸರಿನಲ್ಲಿ ಒಂದಿಷ್ಟು ಬದಲಾವಣೆ ಮಾಡಿದೆ. ಹೀಗಾಗಿ ಇನ್ನು ಮುಂದೆ ಬರೆಯುವಾಗ, ಕರೆಯುವಾಗ ಪೇದೆ, ಮುಖ್ಯ ಪೇದೆ ಎಂದು ಕರೆಯುವಂತಿಲ್ಲ ಆದೇಶಿಸಿದೆ.
ಕಾನ್ಸ್ ಟೇಬಲ್ ಹಾಗೂ ಹೆಡ್ ಕಾನ್ಸ್ ಟೇಬಲ್ ಎಂದು ಕರೆಯಬೇಕು. ಹಾಗೆಯೇ ಬರೆಯಬೇಕು ಎಂದು ಹೇಳಲಾಗಿದೆ. ಪೇದೆ ಹಾಗೂ ಮುಖ್ಯ ಪೇದೆ ಅನ್ನೋ ಪದ ಅಷ್ಟೊಂದು ಸಮಂಜಸವಾಗಿಲ್ಲ. ಹೀಗಾಗಿ ಕಾನ್ಸ್ ಟೇಬಲ್, ಹೆಡ್ ಕ್ಯಾನ್ಸ್ ಟೇಬಲ್ ಎಂದು ಕರೆಯಬೇಕು, ಬರೆಯಬೇಕು ಎಂದು ಆದೇಶ ಹೊರಡಿಸಲಾಗಿದೆ.