ಟ್ರೇಲರ್ ನೋಡಲು ಹಣ ಎಂದಿದ್ದ ‘ಆರ್ ಜಿವಿ’ಗೆ ಶಾಕ್

294

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಮಗೋಪಾಲ ವರ್ಮಾ ನಿರ್ದೇಶನದ ಪವರ್ ಸ್ಟಾರ್ ಸಿನಿಮಾದ ಟ್ರೇಲರ್ ನೋಡಲು ಸಹ ದುಡ್ಡು ಕೊಡಬೇಕು ಎಂದು ಹೇಳಿದ್ರು. ಜುಲೈ 22ರಂದು ಟ್ರೇಲರ್ ರಿಲೀಸ್ ಮಾಡುತ್ತೇನೆ. ಇದಕ್ಕೆ 25 ರೂಪಾಯಿ ಕೊಡಬೇಕು ಎಂದಿದ್ರು. ಆದ್ರೆ, ಇದೀಗ ಅದೆಲ್ಲ ಉಲ್ಟಾ ಹೊಡೆದಿದೆ.

ನಟ, ರಾಜಕಾರಣಿ ಪವನ ಕಲ್ಯಾಣ ರಾಜಕೀಯ ಜೀವನದ ಕುರಿತು ಸಿನಿಮಾ ಮಾಡಿರುವ ಆರ್ ಜಿವಿ, ಜುಲೈ 25ರಂದು ಆರ್ ಜಿವಿ ವರ್ಲ್ಡ್ ಥಿಯೇಟರ್ ಆ್ಯಪ್ ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಆದ್ರೆ, ಇಂದು ರಿಲೀಸ್ ಆಗಬೇಕಿದ್ದ ಟ್ರೇಲರ್ ಲೀಕ್ ಆಗಿ ಹೋಗಿದೆ. ಹೀಗಾಗಿ ಯೂಟ್ಯೂಬ್ ನಲ್ಲಿ ಪವರ್ ಸ್ಟಾರ್ ಚಿತ್ರದ ಟ್ರೇಲರ್ ಬಿಟ್ಟಿದ್ದಾರೆ.

ಪವನ ಕಲ್ಯಾಣ ಹೆಸರು ಬದಲು ಪ್ರವನ ಕಲ್ಯಾಣ ಎಂದು ಹೆಸರು ಚೇಂಜ್ ಮಾಡಿರುವ ಆರ್ ಜಿವಿ ತೆಲುಗು ನೆಲದ ಮತ್ತೊಂದು ರಾಜಕೀಯ ಕಥೆ ಹೇಳ್ತಿದ್ದು, ಅಡ್ವಾನ್ ಬುಕ್ಕಿಂಗ್ ಗೆ 150, ರಿಲೀಸ್ ಆದ್ಮೇಲೆ ಆದ್ರೆ 250 ರೂಪಾಯಿ ಅಂದಿದ್ದಾರೆ.

ಟ್ರೇಲರ್ ಲೀಕ್ ಆಗುವ ಮೂಲಕ ಆರ್ ಜಿವಿಗೆ ಶಾಕ್ ಕೊಟ್ಟಿದ್ದು, ಸಿನಿಮಾ ರಿಲೀಸ್ ಕಥೆ ಏನು ಅನ್ನೋ ಟೆನ್ಷನ್ ಮೂಡಿದೆ. ಟ್ರೇಲರ್ ಮೂಲಕವೂ ದುಡ್ಡು ಮಾಡಬೇಕು ಎಂದಿದ್ದ ನಿರ್ದೇಶಕನ ಪ್ಲಾನ್ ಉಲ್ಟಾ ಆಗಿದೆ.




Leave a Reply

Your email address will not be published. Required fields are marked *

error: Content is protected !!