ಬಾಲಿವುಡ್ ಸ್ಟಾರ್ ನಟಿರಿಗೆ ವರ್ಮಾ ಸವಾಲು

493

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಇಂಡಿಯನ್ ಸಿನಿಮಾಗಳ ಎದುರು ಬಾಲಿವುಡ್ ಚಿತ್ರಗಳು ಸಂಪೂರ್ಣ ಮಕಾಡೆ ಮಲಗಿವೆ. ಇದರಿಂದಾಗಿ ಬಿಟೌನ್ ಸ್ಟಾರ್ ನಟರ ಕಣ್ಣು ಕೆಂಪಾಗಿವೆ. ಹೀಗಾಗಿಯೇ ಭಾಷೆಯ ವಿಚಾರ ಇಟ್ಟುಕೊಂಡು ಜಗಳಕ್ಕೆ ನಿಂತವರಿಗೆ ಕನ್ನಡಿಗರು ಸರಿಯಾಗಿ ತಿರುಗೇಟು ನೀಡಿದ್ದು, ತೆಲುಗು ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸವಾಲೆಸೆದಿದ್ದಾರೆ.

ರಣವೀರ್ ಸಿಂಗ್, ರಣಬೀರ್ ಕಪೂರ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಜಾನ್ ಅಬ್ರಾಹಾಂ ಸೇರಿದಂತೆ ಮುಂತಾದ ನಟರು ತಮ್ಮ ಚಿತ್ರಗಳನ್ನು ಕನ್ನಡ, ತೆಲುಗು ಸೇರಿ ಇತರೆ ಭಾಷೆಗಳಿಗೂ ಡಬ್ ಮಾಡಿ ಹೆಚ್ಚು ಹಣ ಗಳಿಕೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಭಾಷಾ ವಿಚಾರದಲ್ಲಿ ಗಲಾಟೆ ಮಾಡುವ ಬದಲು ಎಲ್ಲ ನಟರು, ನಿರ್ದೇಶಕರು ಎಲ್ಲ ಭಾಷೆಗಳಲ್ಲಿ ಸಿನಿಮಾ ಮಾಡುವ ಆರೋಗ್ಯಕರ ಸ್ಪರ್ಧೆ ಇರಲಿ ಎಂದಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!