ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟಿ ಪ್ರಣೀತಾ ಸುಭಾಷ್ ಹೊಸ ಖುಷಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನು ಅಂದರೆ ಅವರು ತಾಯಿ ಆಗುತ್ತಿರುವ ವಿಚಾರವನ್ನು ಟ್ವೀಟರ್ ಮೂಲಕ ತಿಳಿಸಿದ್ದಾರೆ. ಪತಿಯ 34ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಮೇಲಿನ ದೇವತೆಗಳಿಂದ ಊಡುಗರೆಯೆಂದು ಭಾವಿಸುತ್ತೇನೆ ಎಂದು ಬರೆದಿದ್ದಾರೆ.
ಉದ್ಯಮಿ ನಿತಿನ್ ರಾಜು ಎಂಬುವರ ಜೊತೆಗೆ ಕಳೆದ ಮೇ ತಿಂಗಳಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸರಳವಾಗಿ ಮದುವೆಯಾಗಿದ್ದ ಜೋಡಿ ಖುಷಿಯನ್ನು ಹಂಚಿಕೊಂಡಿದೆ.