ಸಚಿವೆಯಾದ ಲಕ್ಕಿ ಚಾರ್ಮ್ ರೋಜಾ

468

ಪ್ರಜಾಸ್ತ್ರ ಸುದ್ದಿ

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟವನ್ನು ಪುನರ್ ರಚನೆ ಮಾಡಿದ್ದಾರೆ. ನಟಿ ಹಾಗೂ ವೈಎಸ್ಆರ್ ಸಿಪಿ ನಾಯಕಿ ರೋಜಾ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ತುಂಬಾ ಭಾವುಕರಾದ ರೋಜಾ, ಕಣ್ಣೀರು ಹಾಕುತ್ತಾ ತೆಲುಗಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಸಿಎಂ ಜಗನ್ ಬಳಿ ತೆರಳಿ ಕಾಲಿಗೆ ನಮಸ್ಕರಿಸಿ ಕೈಗೆ ಮುತ್ತಿಕ್ಕಿದರು. ತೆಲುಗು ದೇಶಂ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯಾಗಿದ್ದ ರೋಜಾ 2009ರಲ್ಲಿ ಸೋಲು ಅನುಭವಿಸಿದ್ದರು.

ನಂತರ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದರು. ಎರಡು ಬಾರಿ ಶಾಸಕಿಯಾಗಿದ್ದರು ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. ಮೊದಲಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದರು. ಇದೀಗ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆರಂಭದಲ್ಲಿ ರೋಜಾಗೆ ಐರನ್ ಲೆಗ್ ಎಂದು ಹೀಯಾಳಿಸಿದ್ದರು. ಮುಂದೆ ಎರಡು ಬಾರಿ ಶಾಸಕಿಯಾದ ಅವರು ಲಕ್ಕಿ ಚಾರ್ಮ್ ಎಂದು ಹೇಳಿದ್ದರು. ಇನ್ನು ಒಟ್ಟು 25 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಹೊಸ ಸಚಿವ ಸಂಪುಟ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!