ಹೋಳಿ ಹಬ್ಬದಲ್ಲಿ ಬೈಕ್ ಸೈಲೆನ್ಸರ್ ತೆಗೆದ್ರೆ ಕೇಸ್

421

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಹೋಳಿ ಹಬ್ಬದ ಸಮಯದಲ್ಲಿ ಯಾವುದೇ ರೀತಿಯಿಂದ ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ಕೆಲಸವಾಗಬಾರದು ಎಂದು ಸಿಪಿಐ ಹೆಚ್.ಎಂ ಪಟೇಲ ಹೇಳಿದರು.

ಹೋಳಿ ಹಬ್ಬದ ಪ್ರಯುಕ್ತ ಬುಧವಾರ ಸಂಜೆ ಶಾಂತಿ ಸಭೆ ನಡೆಸಿದ ಅವರು, ಕರೋನಾ 2ನೇ ಅಲೆ ಇದೆ. ಹೀಗಾಗಿ ಹಬ್ಬದ ವೇಳೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು. 10-20ಕ್ಕಿಂತ ಹೆಚ್ಚಿನ ಜನರು ಸೇರಬಾರದು. ಯಾರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರದಂತೆ ಹಬ್ಬ ಆಚರಿಸಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಪಿಎಸ್ಐ ಸಂಗಮೇಶ ಹೊಸಮನಿ ಮಾತ್ನಾಡಿ, ಪಟ್ಟಣದಲ್ಲಿ ಮೆರವಣಿಗೆ ಬ್ಯಾನ್ ಮಾಡಲಾಗಿದೆ. ರಾತ್ರಿ 12ಗಂಟೆಯೊಳಗೆ ಕಾಮ ದಹನ ಮಾಡಿ ಮುಗಿಸಬೇಕು. ಈ ವೇಳೆ ಬೈಕ್ ಗಳ ಸೈಲೆನ್ಸರ್ ತೆಗೆದು ಓಡಾಟ ಮಾಡುವುದು ಕಂಡು ಬಂದ್ರೆ ಮುಲಾಜಿಲ್ಲದೆ ಬೈಕ್ ಸೀಜ್ ಮಾಡಲಾಗುವುದು ಎಂದರು. ಸೌಮ್ಯ ಪಟ್ಟಣವೆಂದು ಹೆಸರು ಮಾಡಿರುವ ಸಿಂದಗಿ ಜನತೆ ಪೊಲೀಸರೊಂದಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅದೆ ರೀತಿ ಇನ್ನು ಮುಂದೆಯೂ ಸಹಕಾರ ನೀಡಿ ಎಂದರು.

ಸುನಂದಾ ಯಂಪೂರೆ, ಜಗದೀಶ, ಸಿಂದಗಿಕರ, ಹರ್ಷವರ್ಧನ, ಸಾಯಿಬಣ್ಣ ಸೇರಿದಂತೆ ಹಲವರು ಮಾತ್ನಾಡಿ, ಪೊಲೀಸ್ ಇಲಾಖೆಯೊಂದಿಗೆ ಎಲ್ಲರ ಸಹಕಾರ ಇರುತ್ತೆ. ಶಾಂತಿ ಕದಡುವ ಕೆಲಸ ಮಾಡುವುದಿಲ್ಲ. ಆದ್ರೆ, ಈ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತೆ. ಅದಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು. ಈ ವೇಳೆ ಮೊಹಮ್ಮದ ಪಟೇಲ, ಶಿವಾನಂದ ಆಲಮೇಲ, ಅನುಸುಯಾ ಪರಗೊಂಡ, ರಾಜಕುಮಾರ ಬಾಸಗಿ, ಮಹಾವೀರ ಸುಲ್ಫಿ, ಇರ್ಫಾನ ಸೇರಿದಂತೆ ಅನೇಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!