ಪಟ್ಟಣಗಳಲ್ಲಿ ವಿದ್ಯುತ್ ಪ್ರಿಪೇಯ್ಡ್ ಮೀಟರ್ ಅಳವಡಿಕೆ: ಸಚಿವ ವಿ.ಸುನೀಲ್ ಕುಮಾರ್

252

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುತ್ತಿಲ್ಲ. ವಿದ್ಯುತ್ ಪಂಪ್ ಸೆಟ್ ಗಳಿಗೆ, ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಹಾಗೂ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಮಾಡುವ ಪ್ರಸ್ತಾಪವಿಲ್ಲವೆಂದು ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.

ಜನರಲ್ಲಿ, ರೈತರಲ್ಲಿ ಮೂಡಿರುವ ಗೊಂದಲ ಬಗೆಹರಿಸಬೇಕೆಂದ ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದರು. ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಕೆಗೆ ಚಿಂತನೆ ನಡೆದಿದೆ. ಯಾಕಂದರೆ, 5,792 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಹೀಗಾದರೆ ಇಲಾಖೆ ಸುಧಾರಣೆ ಹೇಗೆ ಎಂದರು.

27 ಅಮೃತ ನಗರ, ಪಟ್ಟಣಗಳಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೂ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಪ್ರಸ್ತಾಪನೆ ಇಲ್ಲವೆಂದು ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

ಪ್ರಿಪೇಯ್ಡ್ ಮೀಟರ್ ಅಳವಡಿಕೆಯಿಂದ ಸಾರ್ವಜನಿಕರಿಗೆ ಮತ್ತಷ್ಟು ಹೊರೆಯಾಗಲಿದೆ. ಪ್ರತಿ ತಿಂಗಳು ಮೊದಲೇ ಹಣ ಪಾವತಿಸಿ ವಿದ್ಯುತ್ ಪಡೆಯಬೇಕಾಗುತ್ತೆ. ಹೀಗಾದರೆ, ಸಾರ್ವಜನಿಕರ ಬಳಿ ಹಣವಿಲ್ಲದೆ ಹೋದರೆ ಕತ್ತಲಲ್ಲಿ ಉಳಿಯಬೇಕಾಗುತ್ತೆ. ಪ್ರತಿ ತಿಂಗಳು ಒಂದು ರೀತಿಯ ರಿಸಾರ್ಜ್ ಮಾಡಿಸಲು ಆಗುತ್ತಾ? ಇಲಾಖೆ ಮೊದಲೇ ನಿಗದಿ ಮಾಡಿದ ಹಣ ಕೊಟ್ಟ ರಿಸಾರ್ಜ್ ಮಾಡಿಸಿದರೆ ಆ ತಿಂಗಳು ಅಷ್ಟೊಂದು ವಿದ್ಯುತ್ ಬಳಕೆಯಾಗದೆ ಹೋದರೆ ಉಳಿದ ಹಣ ಕೊಡೋದು ಯಾರು? ಎಲ್ಲದಕ್ಕೂ ಹೀಗೆ ಮಾಡುತ್ತಾ ಹೋದರೆ ಸರ್ಕಾರಿ ಸೇವೆ ಅನ್ನೋ ಪದವನ್ನೇ ತೆಗೆದು ಹಾಕಬೇಕಾಗುತ್ತೆ.




Leave a Reply

Your email address will not be published. Required fields are marked *

error: Content is protected !!