ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಬರಬಹುದು: ಸುಬ್ರಮಣಿಯನ್ ಸ್ವಾಮಿ

558

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಸ್ವಪಕ್ಷದ ಕೇಂದ್ರಾಡಳಿತದ ವಿರುದ್ಧವೇ ಸದಾ ವಾಗ್ದಾಳಿ ನಡೆಸುತ್ತಾರೆ. ಟ್ವೀಟ್ ಮೂಲಕ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಸೇರಿದಂತೆ ಇತರರ ವಿರುದ್ಧ ಟೀಕಾಸ್ತ್ರ ಮಾಡುತ್ತಾರೆ ಜೊತೆಗೆ ಆಕ್ರೋಶ ಹೊರ ಹಾಕುತ್ತಾರೆ. ಇಂದು ಬೆಳ್ಳಂಬೆಳಗ್ಗೆಯೊಂದ ಟ್ವೀಟ್ ಮಾಡಿದ್ದು, ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಬರಬಹುದು ಎಂದಿದ್ದಾರೆ.

ಓಮಿಕ್ರಾನ್ ನಿಂದ ಲಾಕ್ ಡೌನ್ ಜಾರಿಗೆ ಬಂದರೂ ಬರಬಹುದು. ಉತ್ತರ ಪ್ರದೇಶ ಚುನಾವಣೆಯನ್ನು ಸೆಪ್ಟೆಂಬರ್ ವರೆಗೂ ಮುಂದೂಡಿ ಅಲ್ಲಿ ರಾಷ್ಟ್ರಪತಿ ಆಡಳಿತ ಬಂದರೂ ಬರಬಹುದು. ನೇರವಾಗಿ ಮಾಡಲು ಆಗದನ್ನು ಹೀಗೆ ಮಾಡಬಹುದು ಎಂದು ಹೇಳುವ ಮೂಲಕ ಮತ್ತೆ ಅಚ್ಚರಿ ಮೂಡಿಸಿದ್ದಾರೆ.

ಯುಪಿ ಸಿಎಂ ಯೋಗಿ ಆದಿತ್ಯನಾಥರನ್ನು ಪಕ್ಕಕ್ಕೆ ಸರಿಸಿ ಮೋದಿ ಆಪ್ತರಾದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯರನ್ನು ಸಿಎಂ ಸ್ಥಾನಕ್ಕೆ ತರಲು ತೆರೆಮರೆ ಆಟ ನಡೆದಿದೆ ಅನ್ನೋದು ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಇದೀಗ ಮೋದಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!