ಪಂಜಾಬ್ ಸರ್ಕಾರದಿಂದ ರೈತರಿಗೆ ಬಿಗ್ ಗಿಫ್ಟ್

484

ಪ್ರಜಾಸ್ತ್ರ ಸುದ್ದಿ

ಚಂಢೀಗಢ: ಹೊಸ ವರ್ಷದ ಸಂದರ್ಭದಲ್ಲಿ ಪಂಜಾಬ್ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ ನೀಡುತ್ತಿದೆ. ಇದು ಮಂಬರುವ ವಿಧಾನಸಭೆ ಸಾರ್ವತ್ರಿಕೆ ಚುನಾವಣೆಯ ರಾಜಕೀಯ ತಂತ್ರಗಾರಿಕೆಯೂ ಇರಬಹುದು.

ಪಂಜಾಬ್ ಸರ್ಕಾರ 2 ಲಕ್ಷ ರೂಪಾಯಿವರೆಗಿನ ರೈತರ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಘೋಷಿಸಿದ್ದಾರೆ.

5 ಎಕರೆವರೆಗೂ‌ ಕೃಷಿ ಭೂಮಿ ಹೊಂದಿರುವ ರೈತರ 2 ಲಕ್ಷ ರೂಪಾಯವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು. ಸಾಲ ಮನ್ನಾ ಯೋಜನೆ 10 ದಿನಗಳ ಒಳಗೆ ಜಾರಿಗೆ ಬರಲಿದೆ. ಭೂರಹಿತ ಕಾರ್ಮಿಕರ ಸಾಲವನ್ನೂ ನಾವು ಮನ್ನಾ ಮಾಡಿದ್ದೇವೆ. ಸಾಮಾನ್ಯ ವರ್ಗದವರ ಸಾಲ ಮನ್ನಾ ಕುರಿತು ನಿರ್ಧರಿಸಿಲು ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಈ ವೇಳೆ ಅವರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!