ರಾಜ್ಯದ 5,800 ಗ್ರಾ.ಪಂ ಚುನಾವಣೆಗೆ ಸಿದ್ಧತೆ

308

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇನ್ನು ಕೆಲವು ದಿನಗಳಲ್ಲಿ ಲೋಕಲ್ ಫೈಟ್ ನಡೆಯಲಿದೆ. ಅಂದ್ರೆ, ನಾಡಿನ 5,800 ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ನಡೆಯಲಿದೆ. ಅಲ್ಲಿಗೆ ಗ್ರಾಮಗಳಲ್ಲಿ ರಾಜಕೀಯ ಚುಟುವಟಿಕೆ ಬಿರುಸಿನಿಂದ ಕೂಡಿರಲಿವೆ. ಹೀಗಾಗಿ ಈಗಾಗ್ಲೇ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ.

ಆಗಸ್ಟ್ 27ರ ಗಜೆಟ್ ನಲ್ಲಿ ಗ್ರಾಮ ಪಂಚಾಯ್ತಿ ಮೀಸಲಾತಿ ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಿದೆ. ಅಂತಿಮ ಹಂತದ ಮತದಾರರ ಪಟ್ಟಿ ಸಹ ಬಿಡುಗಡೆಯಾಗಿದೆ. ಕೋವಿಡ್ 19 ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಚುನಾವಣೆ ಆಯೋಗ ಚರ್ಚೆ ನಡೆಸಿದೆ.

ಈಗಾಗ್ಲೇ ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ಮುಗಿದಿದೆ. ಆಡಳಿತಾಧಿಕಾರಿಗಳ ನೇಮಕವಾಗಿದ್ದು, ನವೆಂಬರ್ ನಲ್ಲಿ ಎಲೆಕ್ಷನ್ ನಡೆಯುವ ಸಾಧ್ಯತೆಯಿದೆ. ಈ ಸಂಬಂಧ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಆಗ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಸಹ ನೀಡಿತ್ತು. ಇದೀಗ ನವೆಂಬರ್ ನಲ್ಲಿ ಎಲೆಕ್ಷನ್ ನಡೆಯಬಹುದು.




Leave a Reply

Your email address will not be published. Required fields are marked *

error: Content is protected !!