ಗುಮ್ಮಟನಗರಿಯಲ್ಲಿ ಕೆಲವೇ ಕ್ಷಣಗಳಲ್ಲಿ ಗ್ರಾ.ಪಂ ಹಣೆಬರಹ ಓಪನ್

270

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಐತಿಹಾಸಿಕ ಗುಮ್ಮಟನಗರಿ ವಿಜಯಪುರ ಜಿಲ್ಲಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ಕೊರೋನಾ ಮಧ್ಯೆಯೂ ತೀವ್ರ ಬಿರುಸಿನಿಂದ ಎರಡು ಹಂತದಲ್ಲಿ ಯಶಸ್ವಿಯಾಗಿದ್ದು, ಇನ್ನು ಜಿಲ್ಲಾದ್ಯಂತ ಪ್ರತಿ ಗ್ರಾಮದಲ್ಲಿ ತೀವ್ರ ಕೌತುಕ ಮೂಡಿಸಿರುವ ಗ್ರಾಮ ಪಂಚಾಯ್ತಿ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಕಾವಲು ವ್ಯವಸ್ಥೆ ಮಾಡಲಾಗಿದೆ.

ಅಲ್ಲದೇ, ವಿಜಯಪುರ ಜಿಲ್ಲೆಯ 212 ಗ್ರಾಮ ಪಂಚಾಯ್ತಿಗಳಿದ್ದು, ಅದರಲ್ಲಿ ಈಗಾಗಲೇ 199 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆದಿದ್ದು, ಈ 199 ಗ್ರಾಮ ಪಂಚಾಯ್ತಿಗಳ 3754 ಅಭ್ಯರ್ಥಿಗಳ ಭವಿಷ್ಯ ಇಂದು ಹೊರಬಲಿದೆ. ಅಲ್ಲದೇ, 369 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 3380‌ ಚುನಾವಣೆ ನಡೆದ ಸ್ಥಾನಕ್ಕೆ 9247 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ನಾನಾ ಕಾರಣದಿಂದಾಗಿ 13 ಪಂಚಾಯ್ತಿಗಳಿಗೆ ಚುನಾವಣೆ ನಡೆದಿಲ್ಲ.

ಇನ್ನೂ ಈಗಾಗಲೇ ಜಿಲ್ಲಾದ್ಯಂತ ವಿಜಯಪುರದ, ಕೋಲ್ಹಾರ, ಇಂಡಿ, ಸಿಂದಗಿ, ದೇವರಹಿಪ್ಪರಗಿ ಸೇರಿದಂತೆ ಆಯಾ ತಾಲೂಕಿನಲ್ಲಿ ಮತ ಎಣಿಕೆ ಆರಂಭವಾಗಿದೆ. ಇನ್ನೇನು ಇದ್ರೂ ಎಲ್ಲರ ಚಿತ್ತ ತಮ್ಮ ಗ್ರಾಮದ ಅಭ್ಯರ್ಥಿಯ ಜಯದತ್ತವಾಗಿದೆ…




Leave a Reply

Your email address will not be published. Required fields are marked *

error: Content is protected !!