ಅರಣ್ಯ ಇಲಾಖೆ ಕೊಟ್ಟ ಬಂದೂಕು ಕಳೆದುಕೊಂಡರೇ ಅಧಿಕಾರಿ?

883

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಅರಣ್ಯ ರಕ್ಷಣೆಗೆಂದು ಇಲಾಖೆ ನೀಡಿದ ಬಂದೂಕನ್ನೇ ಕಳೆದುಕೊಂಡು(ನಾಪತ್ತೆಯಾಗಿದೆ), ಅಧಿಕಾರಿಯೊಬ್ಬ ಪೇಚಿಗೆ ಸಿಲುಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲೆಯ ಗುಜನಾಳ ವಲಯ ಅರಣ್ಯ ಇಲಾಖೆ ಅಧಿಕಾರಿಯಾದ ಅಮೃತ ಗಂಡೋಶಿ ಎಂಬುವರೇ, ಇಲಾಖೆಯ ಬಂದೂಕನ್ನು ಕಳೆದುಕೊಂಡ ಅಧಿಕಾರಿ. ಅರಣ್ಯ ಇಲಾಖೆಯ ಬಂದೂಕನ್ನು ಕರ್ತವ್ಯ ನಿರತ ಅಧಿಕಾರಿಯೇ ಇಟ್ಟುಕೊಳ್ಳಬೇಕು‌. ಅದನ್ನು ಬೇರೆ ಯಾರ ಕೈಗೂ ಕೊಡಬಾರದು ಎಂಬ ನಿಯಮವಿದೆ. ಆದರೆ ಈ ಅಮೃತ ಗಂಡೋಶಿ ಅದ್ಯಾರ್ ಕೈಗೆ ಅದನ್ನು ಕೊಟ್ಟಿದ್ದಾರೋ? ಅಥವಾ ಅದ್ಯಾವ ಮಹಾನ್ ಭೂಪ ಕದ್ಯೋಯ್ದಿದ್ದಾನೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಇಲಾಖೆಯ ಬಂದೂಕು ಕಳೆದುಕೊಂಡಿರುವ ಅಮೃತ ಇಲಾಖೆಯ ಸಿಬ್ಬಂದಿಯಿಂದ ತಡರಾತ್ರಿಯಿಂದಲೇ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಕಳೆದುಕೊಡ ಬದೂಕು ಇಲ್ಲಿಯವರೆಗೂ ಪತ್ತೇಯಾಗಿಲ್ಲ. ಈ ಹಿಂದೇಯೂ ಅನೇಕ ಬಾರಿ ಅಧಿಕಾರಿ ಅಮೃತ ಬಂದೂಕನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ವಾಚಮನ್ ಕೈಗೆ ಕೊಟ್ಟ ಉದಾಹರಣೆ ಬಹಳಷ್ಟು ಇವೆ. ಕಳೆದುಕೊಂಡ ಬಂದೂಕಿಗೆ ಬದಲಾಗಿ ಅದೇ ಮಾದರಿಯ ಬಂದೂಕನ್ನು ತಂದು ಇಲಾಖೆಯ ಹಿರಿಯ ಅಧಿಕಾರಿಯ ಕಣ್ಣಿಗೆ ಮಣ್ಣೆರಚುವ ಪ್ರಯತ್ನವೋ ಮತ್ತೊಂದು ಕಡೆಯಿಂದ ನಡೆಯುತ್ತಿದೆ ಎಂಬ ಗುಸು-ಗುಸು ಚರ್ಚೆಗಳು ಗುಜನಾಳ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ನಿಜಕ್ಕೂ ಬಂದೂಕು ಕಳೆದಿದೆಯೋ? ನಾಪತ್ತೆಯಾಗಿದೇಯೋ ಅಥವಾ ಕಾರ್ಯಾಚರಣೆಯಲ್ಲಿ ಯಾರಾದರೂ ಕಿಡಿಗೇಡಿಗಳು ಕಸಿದುಕೊಂಡಿದ್ದಾರೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ನನ್ನ ಬಂದೂಕು ನಾಪತ್ತೆಯಾಗಿರುವುದು ನಿಜ. ಸಾಕಷ್ಟು ಹುಡುಕಾಟ ನಡೆಸಿದರೂ ಅದು ಸಿಗುತ್ತಿಲ್ಲ. ಈ ಕುರಿತು ಮೇಲಧಿಕಾರಿಗಳಿಗೂ ತಿಳಿಸಿದ್ದೇನೆ‌. ಜೊತೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದೇನೆ.

ಅಮೃತ ಗಂಡೋಶಿ,ಗುಜನಾಳ ವಲಯ ಅರಣ್ಯ ಅಧಿಕಾರಿ


ನನ್ನ ಗಮನಕ್ಕೂ ಬಂದಿದೆ. ಗುಜನಾಳ ವಲಯ ಅರಣ್ಯ ಅಧಿಕಾರಿಯ ಬಂದೂಕು ನಾಪತ್ತಯಾಗಿರುವ ಬಗ್ಗೆ ಈಗಾಗಲೇ ಕೆಳ ಹಂತದ ಅಧಿಕಾರಿಗಳಿಂದ ನನಗೂ ಮಾಹಿತಿ ಬಂದಿದೆ. ಈ ಕುರಿತು ಆದಷ್ಟು ಬೇಗ ಸ್ಪಷ್ಟ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇನೆ. ಮಾಹಿತಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.

ವಿಜಯಕುಮಾರ್ ಸಾಲಿಮಠ, ಸಿಸಿಎಫ್ ಬೆಳಗಾವಿ



Leave a Reply

Your email address will not be published. Required fields are marked *

error: Content is protected !!