ಖರ್ಗೆ ವ್ಯಂಗ್ಯಕ್ಕೆ ಡಿವಿಎಸ್ ಟ್ವೀಟ್ ಟೀಕಾಸ್ತ್ರ

363

ಅಮಿತ್ ಶಾ ಅವರಿಗೆ ಗೃಹಖಾತೆ ನೀಡಿದ್ದನ್ನ ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಡಿವಿ ಸದಾನಂದಗೌಡ ಟ್ವೀಟ್ ನಲ್ಲಿ ಟೀಕಿಸಿದ್ದಾರೆ.

ಮಾನ್ಯ ಪ್ರಿಯಾಂಕ್ ಖರ್ಗೆ ಅವರೆ ಕೈ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳಬೇಡಿ. ನಿಮ್ಮ ಪಕ್ಷದ ಚಿಹ್ನೆ ‘ಕೈ’ ಅದರ ಅವಲಕ್ಷಣ ದೇಶದ ಜನ ಹೇಳಿ 10 ದಿನವೂ ಆಗಿಲ್ಲ. ಆಗಲೇ ಶುರು ಮಾಡಿದ್ರಲ್ಲ ನಿಮ್ಮ ಹಿರಿಯಕ್ಕನ ಚಾಳಿ. ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ಆಮೇಲೆ ಊರು ಉಸಾಬರಿಗೆ ಬರುವಿರಂತೆ ಅಂತಾ ಟ್ವೀಟ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ಅವರಿಗೆ ಗೃಹಖಾತೆ ಕೊಟ್ಟಿರುವುದ್ರಿಂದ ಅದನ್ನ ಕ್ಲೀನ್ ಚಿಟ್ ಸಚಿವಾಲಯ ಎಂದು ಬದಲಿಸುವುದು ಸೂಕ್ತ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ರು.


TAG


Leave a Reply

Your email address will not be published. Required fields are marked *

error: Content is protected !!