ಬ್ರೇಕಿಂಗ್ ನ್ಯೂಸ್ : ನಿರ್ಮಾಪಕ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಪತಿಗೆ ಜೀವಾವಧಿ ಶಿಕ್ಷೆ

1829

ಬೆಂಗಳೂರು: ನಿರ್ಮಾಪಕ, ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಅವರ ಪತಿ ಗೋವರ್ಧನಮೂರ್ತಿಗೆ ಹೈಕೋರ್ಟ್ ವಿಭಾಗೀಯ ಪೀಠ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಾಗಲೂರಿನ ಎಲ್ ಜಿ ರೋಸ್ ಗೆಸ್ಟ್ ಹೌಸ್ ನಲ್ಲಿ 2008, ಅಕ್ಟೋಬರ್ 6-7ರ ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಆಗ 7.7 ಪಿಸ್ತೂಲಿನಿಂದ ಸಹ ನಟ ವಿನೋದಗೆ ಎರಡು ಗುಂಡು ಬಿದ್ದಿದ್ವು. ಆಸ್ಪತ್ರೆಗೆ ಸೇರಿಸಲಾದ್ರೂ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದ. ನಾಪತ್ತೆಯಾಗಿದ್ದ ಗೋವರ್ಧನನ್ನ ಕೊಚ್ಚಿಯಲ್ಲಿ ಬಂಧಿಸಲಾಗಿತ್ತು. 2012ರಲ್ಲಿ ಖುಲಾಸೆಗೊಂಡಿದ್ರು.

ಸೆಷನ್ಸ್ ಕೋರ್ಟ್ ನಿಂದ ಖುಲಾಸೆಗೊಂಡಿದ್ದ ಗೋವರ್ಧನ ಎಲ್ಲವನ್ನ ಮರೆತು 2017ರಲ್ಲಿ ಕೆಪಿಸಿಸ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಅವರನ್ನ ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ರು. ಮಂಜುಳಾ ಹೆಚ್.ಎಂ ರೇವಣ್ಣನವರ ದೂರದ ಸಂಬಂಧಿಯಾಗಿದ್ದಾರೆ. ಆದ್ರೆ, ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಎಸ್ ಪಿಪಿ ವಿ.ಎಂ ಶೀಲವಂತರ ವಾದಿಸಿದ್ರು. ನ್ಯಾಯಮೂರ್ತಿ ಎಸ್.ಎನ್ ಸತ್ಯನಾರಾಯಣ, ಹೆಚ್.ಪಿ ಸಂದೇಶ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಗೋವರ್ಧನಗೆ 5 ಲಕ್ಷ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ದಂಡದ ಮೊತ್ತದಲ್ಲಿ 4.50 ಲಕ್ಷ ವಿನೋದ ತಾಯಿಗೆ ನೀಡಲು ಸೂಚಿಸಿದೆ.

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ನಟನೆಯ ಮಾದೇಶ ಚಿತ್ರವನ್ನ ಗೋವರ್ಧನಮೂರ್ತಿ ನಿರ್ಮಿಸಿದ್ರು. ಎಷ್ಟೆಲ್ಲ ಘಟನೆ ನಡೆದ್ಮೇಲೆ ಸಿನಿಮಾ ಸಹವಾಸವೇ ಬೇಡವೆಂದು ಸೈಲೆಂಟ್ ಆಗಿದ್ರು. ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.




Leave a Reply

Your email address will not be published. Required fields are marked *

error: Content is protected !!