PUB-G ಆಡೋರೆ ಹುಷಾರ್.. ಸಾವು ನಿಮ್ಮ ಬೆನ್ನ ಹಿಂದಿರುತ್ತೆ!

435

ಶಿವಮೊಗ್ಗ: ಪಬ್ ಜಿ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಯುವ ಜನತೆ ಈ ಆಟಕ್ಕೆ ಮರುಳಾಗಿ ಊಟ, ನಿದ್ದೆ, ಓದು ಎಲ್ಲವನ್ನು ಮರೆಯುತ್ತಿದ್ದಾರೆ. ಕೊನೆಗೆ ಆ ಆಟವೆ ಅವರ ಅಂತ್ಯಕ್ಕೆ ಕಾರಣವಾಗ್ತಿದೆ. ಅದಕ್ಕೊಂದು ಉದಾಹರಣೆ ರಾಜ್ಯದಲ್ಲಿ ನಡೆದಿದೆ.

ಪಬ್ ಜಿ ಆಟಕ್ಕೆ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ನಡೆದಿದೆ. ಹೊಳ್ಳೆಹೊನ್ನೂರು ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ 17 ವರ್ಷದ ಪ್ರೀತಮ ಅನ್ನೋ ಯುವಕ ಬಲಿಯಾಗಿದ್ದಾನೆ.

ರಗ್ಗೇಶ ಮತ್ತು ಸುಧಾ ದಂಪತಿಯ ಮಗ ಪಬ್ ಜಿ ಗೇಮ್ ಆಡುವಾಗ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ ಅಂತಾ ತಿಳಿದು ಬಂದಿದೆ. ಮತ್ತೊಂದು ಕಡೆ ಪಬ್ ಜಿ ಆಟವಾಡುತ್ತಾ ಹೋಗುವಾಗ ರಸ್ತೆಯಲ್ಲಿ ಹಂಪ್ಸ್ ನೋಡದೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನಂತೆ. ಆಸ್ಪತ್ರೆಗೆ ಸಾಗಿಸಲಾಗಿತ್ತಾದ್ರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ.

ಮನೆಯಲ್ಲಿ ಜಗಳ ಮಾಡಿ 40 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಖರೀದಿಸಿದ್ದನಂತೆ. ಮಗನ ಗೇಮ್ ಹುಚ್ಚು ನೋಡಲು ಆಗದೆ ಹೆತ್ತವರು ಮೊಬೈಲ್ ಕಸಿದುಕೊಂಡಿದ್ದರಂತೆ. ಆಗ ಪ್ರೀತಮ ನಿದ್ರೆ ಮಾತ್ರಗಳನ್ನ ತೆಗೆದುಕೊಂಡಿದ್ದನಂತೆ. ಇದ್ರಿಂದ ಹೆದರಿದ ಪೋಷಕರು ವಾಪಸ್ ಮೊಬೈಲ್ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಪಬ್ ಜಿ ಆಡುತ್ತಲೆ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಲಾಗಿದೆ. ಹೊಳೆಹೊನ್ನೂರು ಠಾಣೆ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!