ಇಂಡಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ: ಮೇಲ್ವಿಚಾರಕಿ ಸೇರಿ ಮೂವರ ಮೇಲೆ ಕೇಸ್

408

ಇಂಡಿ: ದ್ವಿತೀಯ ಪಿಯುಸಿ ಪರೀಕ್ಷೆ ಮೊದಲ ದಿನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪಟ್ಟಣದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಅಭ್ಯರ್ಥಿ ಸಹಿತ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪರೀಕ್ಷಾ ಮೇಲ್ವಿಚಾರಕಿಯನ್ನ ಅಮಾನತು ಮಾಡಲು ಶಿಫಾರಸ್ಸು ಮಾಡಲಾಗಿದೆ.

ಪ್ರಶ್ನೆ ಪತ್ರಿಕೆ ತೋರಿಸಿದ ಮುರುಗೇಂದ್ರ ಹಾಗೂ ಭಾಗಪ್ಪ ಸಗರ ಮೇಲೆ ಕೇಸ್ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ.

ಅನುಪಮ ಅಗರವಾಲ್, ಎಸ್ಪಿ

ಮುರುಗೇಂದ್ರ ಹಿರೇಮಠ ಹಾಗೂ ಭಾಗಪ್ಪ ಸಗರ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪರೀಕ್ಷಾ ಮೇಲ್ವಿಚಾರಕಿ ಎಂ.ಡಿ. ನಾರಾಯಣಕರ ಅಮಾನತಿಗೆ ಸೂಚಿಸಲಾಗಿದೆ. ಅತೀ ಸೂಕ್ಷ್ಮ ಕೇಂದ್ರವಾಗಿರುವ ಶಾಂತೇಶ್ವರ ಕಾಲೇಜಿನಲ್ಲಿ ಮೊದಲ ದಿನ ಒಟ್ಟು 7 ವಿದ್ಯಾರ್ಥಿಗಳನ್ನ ಡಿಬಾರ್ ಮಾಡಲಾಗಿದೆ. ಸದರಿ ಕೇಂದ್ರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ. ಪರೀಕ್ಷೆ ಆರಂಭದ ನಂತರ ಮೊಬೈಲ್‌ ನಲ್ಲಿ ಫೋಟೋ ತೆಗೆಯಲಾಗಿದೆ. ತಕ್ಷಣ ಪರೀಕ್ಷಾ ಕೇಂದ್ರಕ್ಕೆ ತರಳಿ ಸೂಕ್ರ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ವೈ.ಎಸ್ ಪಾಟೀಲ, ಜಿಲ್ಲಾಧಿಕಾರಿ

ಘಟನೆ ವಿವರ:

ಬುಧವಾರ ಬೆಳಗ್ಗೆ 10.15ಕ್ಕೆ ಭೌತಶಾಸ್ತ್ರ ಪರೀಕ್ಷೆ ಆರಂಭವಾಗುತ್ತಿದ್ದಂತೆ, ಶಾಂತೇಶ್ವರ ಕಾಲೇಜಿನ ಹಿಂಬದಿಯ ಬಡಾವಣೆಯಿಂದ ನಕಲು ಪೂರೈಕೆಗೆ ತಂಡವೊಂದು ಕಾತರಿಸಿ ನಿಂತಿತ್ತು. ಈ ವೇಳೆ ಭಾಗಪ್ಪ ಸಗರ ಮಾಳಿಗೆ ಮೇಲಿಂದ ಹಿಂಬದಿ ಜಿಗಿದು ಪರೀಕ್ಷಾ ಕೊಠಡಿಯ ಕಿಟಕಿ ಬಳಿ ಬಂದಿದ್ದಾನೆ. ಮುರುಗೇಂದ್ರ ಪ್ರಶ್ನೆ ಪತ್ರಿಕೆ ಹೊರಚಾಚಿದ್ದು ಭಾಗಪ್ಪ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಆಗ ಭಾಗಪ್ಪನ ಸಹಿತ ಪ್ರಶ್ನೆ ಪತ್ರಿಕೆ ಫೋಟದಲ್ಲಿ ಸೆರೆಯಾಗಿದೆ. ಸದರಿ ಫೋಟೊಗಳು ವಾಟ್ಸ್‌ಪ್‌ಗಳಲ್ಲಿ ಹರಿದಾಡುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!