ಸಿನಿ ದುನಿಯಾಗೆ ‘ಮಿಲ್ಕಿ ಬ್ಯೂಟಿ’ ಕಾಲಿಟ್ಟು 15 ವರ್ಷ

387

ಸೌಥ್ ಸಿನಿ ದುನಿಯಾದಲ್ಲಿ ಹೆಸರು ಮಾಡಿರುವ ನಟಿ ತಮನ್ನಾ ಭಾಟಿಯಾ ಟಾಪ್ ಆ್ಯಕ್ಟರ್ಸ್ ಆಗಿ ಗುರುತಿಸಿಕೊಂಡಿದ್ದಾಳೆ. ಕಲರ್ ಫುಲ್ ಚಿತ್ರ ಜಗತ್ತಿಗೆ ಮಿಲ್ಕಿ ಬ್ಯೂಟಿ ಬಂದು 15 ವರ್ಷಗಳು ಕಳೆದಿವೆ. ಹೀಗಾಗಿ ಚಿತ್ರರಂಗದವರು ನಟಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ.

ಮುಂಬೈ ಮೂಲದ ತಮನ್ನಾ ಭಾಟಿಯಾ ಮೊದಲು ನಟಿಸಿದ ಚಿತ್ರ ಬಾಲಿವುಡ್ ನ ಚಾಂದ್ ಸ ರೋಷನ್ ಚಹರಾ. ಇದು ಸಕ್ಸಸ್ ನೀಡಲಿಲ್ಲ. ಆಗ ತಮನ್ನಾ ವಯಸ್ಸು ಕೇವಲ 15 ವರ್ಷ. ಸ್ತೀ ಸಿನ್ಮಾದ ಮೂಲಕ ತೆಲುಗು ಚಿತ್ರಜಗತ್ತಿಗೆ ಎಂಟ್ರಿ ಕೊಡ್ತಾಳೆ. ಹ್ಯಾಪಿ ಡೇಸ್ ಮೂವಿ ತಮನ್ನಾಗೆ ಬಿಗ್ ಹಿಟ್ ನೀಡುತ್ತೆ. ಮುಂದೆ ತಮಿಳು ಕಡೆ ಮುಖ ಮಾಡ್ತಾಳೆ. ಹೀಗೆ ಕಾಲಿವುಡ್, ಟಾಲಿವುಡ್ ಚಿತ್ರಗಳಲ್ಲಿ ಸಕ್ಸಸ್ ಕಂಡ ನಟಿ ಇಲ್ಲಿಯೇ ಗಟ್ಟಿಯಾಗಿ ನೆಲೆಯೂರುತ್ತಾಳೆ.

ಸಾಕಷ್ಟು ಸೂಪರ್ ಸ್ಟಾರ್ ನಟರ ಜೊತೆ ನಟಿಸಿದ ತಮನ್ನಾ ಭಾಟಿಯಾ ಸೌಥ್ ಸಿನಿ ದುನಿಯಾದ ಸ್ಟಾರ್ ನಟಿಯಾಗ್ತಾಳೆ. 15 ವರ್ಷಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಲ್ಕಿ ಬ್ಯೂಟಿ ಕಾಣಿಸಿಕೊಂಡಿದ್ದಾಳೆ. ಕನ್ನಡದಲ್ಲಿ ಜಾಗ್ವಾರ್ ಹಾಗೂ ಕೆಜಿಎಫ್-1ರಲ್ಲಿ ಐಟಿಂ ಸಾಂಗ್ ನಲ್ಲಿ ಬಂದು ಹೋಗಿದ್ದಾಳೆ. ತಮನ್ನಾಳ ವಿವಿಧ ನಟನೆಯ ಫೋಟೋ ಕೋಲಾಜ್ ಮಾಡಿ ಕಾಮನ್ ಡಿಪಿ ರಿಲೀಸ್ ಮಾಡಲಾಗಿದೆ. ಎಲ್ಲರೂ ಇದನ್ನ ಶೇರ್ ಮಾಡಿ ವಿಶ್ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!