ಸರ್ಕಾರಿ ಶಾಲೆಯಲ್ಲೂ ಅದ್ಧೂರಿ ವಾರ್ಷಿಕೋತ್ಸವ

412

ಮಂಡ್ಯ: ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಯಲ್ಲಿ ತುಂಬಾ ಗ್ರ್ಯಾಂಡ್ ಆಗಿ ವಾರ್ಷಿಕೋತ್ಸವ ಕಾರ್ಯಕ್ರಮ ಮಾಡಲಾಗಿದೆ. ಜಿಲ್ಲೆಯ ಕಿಕ್ಕೇರಿ ಸಮೀಪದ ಆನೆಗೊಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವವನ್ನ ಅದ್ಧೂರಿಯಾಗಿ ಆಚರಿಸಲಾಗಿದೆ.

ಕಾರ್ಯಕ್ರಮವನ್ನ ಹಿರಿಯ ನಿವೃತ್ತ ಶಿಕ್ಷಕ ರಾಮೇಗೌಡ್ರು ಉದ್ಘಾಟಿಸಿ ಮಾತ್ನಾಡಿ, ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳಸಬೇಕು. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಹ ಉನ್ನತ ಸ್ಥಾನದ ಸರ್ಕಾರಿ ಹುದ್ದೆಗಳನ್ನ ನಿರ್ವಹಿಸುತ್ತಿದ್ದಾರೆ ಅಂತಾ ಹೇಳಿದ್ರು.

ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕ ಬಿ ಎಂ ಕಿರಣ್ ಮಾತ್ನಾಡಿ, ಸಾರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಣ ಸಿಗ್ತಿದೆ. ಇದನ್ನ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಯೋಗ ಪಡೆದುಕೊಳ್ಳಬೇಕು ಎಂದರು. ಅಲ್ದೇ, ವಿದ್ಯಾರ್ಥಿಗಳು ಹೆತ್ತವರಿಗೆ ತೊಂದರೆ ಕೊಡದಂತೆ ‌ಸಮಾಜದಲ್ಲಿ‌ ಮಾದರಿ ವ್ಯಕ್ತಿಗಳಾಗಿ, ಶಿಕ್ಷಕರಿಗೆ ಗೌರವ ತರಬೇಕು ಅಂತಾ ಕಿವಿ ಮಾತುಗಳನ್ನ ಹೇಳಿದ್ರು.

ಈ ವೇಳೆ ಸಾಧಕರಿಗೆ ಮತ್ತು ಶಾಲೆಯಲ್ಲಿ ಹೆಚ್ಚು ಅಂಕ ಪಡೆದ  ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯ್ತು. ಕಾರ್ಯಕ್ರಮದಲ್ಲಿ ಎಸ್ಟಿಎಂಸಿ ಅಧ್ಯಕ್ಷ ಶವನಂಜೇಗೌಡ್ರು, ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕರಾದ ಬಿ.ಎಸ್ ಮಂಜುನಾಥ, ಹಿರಿಯ ಶಿಕ್ಷಕರಾದ ರಾಮೇಗೌಡ, ಕಾಳೇಗೌಡ, ಪೂರ್ಣಚಂದ್ರ ತೇಜಸ್ವಿ, ಪದ್ಮೇಶ, ಧರ್ಮಪ್ಪ, ಮಂಜೇಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜು, ಕಡಹ್ಮೆಗೆ ರಮೇಶ, ಮಂಜು, ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!