ಉನ್ನಾವೋ ಸಂತ್ರಸ್ತೆ ತಂದೆ ಸಾವು: ಅಪರಾಧಿ ಸೆಂಗಾರಗೆ ಶಿಕ್ಷೆ

393

ನವದೆಹಲಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕೇಸಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸ್ತಿರುವ ಉಚ್ಛಾಟಿತ ಬಿಜೆಪಿ ಕುಲದೀಪ ಸಿಂಗ್ ಸಿಂಗಾರ್ ಇದೀಗ, ಆಕೆಯ ತಂದೆಯ ಸಾವಿನ ಪ್ರಕರಣದಲ್ಲಿಯೂ ಶಿಕ್ಷೆಗೆ ವಿಧಿಸಲಾಗಿದೆ. ದೆಹಲಿಯ ತೀಸ್ ಹಜಾರಿ ಹೈಕೋರ್ಟ್ ಇಂದು ತೀರ್ಪು ನೀಡಿದೆ.

2018 ಏಪ್ರಿಲ್ 9ರಂದು ಪೊಲೀಸ್ ಕಸ್ಟಡಿಯಲ್ಲಿ ಸಂತ್ರಸ್ತೆಯ ತಂದೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ರು. ಇದಕ್ಕೂ ಎರಡು ದಿನಗಳ ಮೂದ್ಲು, ತನ್ನ ಸಹದ್ಯೋಗಿಗಳ ಜೊತೆ ಗ್ರಾಮಕ್ಕೆ ವಾಪಸ್ ಆಗ್ತಿದ್ದ ಟೈಂನಲ್ಲಿ ಶಶಿ ಪ್ರತಾಪ ಸಿಂಗ್ ಎಂಬಾತ ಲಿಫ್ಟ್ ಕೇಳಿದ್ದಾನೆ. ಇದನ್ನು ನಿರಾಕರಿಸಿದಾಗ, ಕುಲದೀಪ ಸಿಂಗಾರ ಸಹೋದರ ಅಟುಲ್ ಸಿಂಗಾರ್ ಸಹಚರರಿಗೆ ಫೋನ್ ಮಾಡಿ ಕರೆಸಿಕೊಂಡು ಆಕೆಯ ತಂದೆಯ ಮೇಲೆ ಮನಸ್ಸೋ ಇಚ್ಛೆ ಥಳಿಸಿದ್ರು.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ರು ಆತನನ್ನು ಆಸ್ಪತ್ರೆಗೆ ದಾಖಲಿಸುವ ಬದ್ಲು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ರು. ಇದಾದ 2 ದಿನಗಳಲ್ಲಿ ಅನುಮಾನಸ್ಪದ ರೀತಿಯಲ್ಲಿ ಆತ ಸಾವನ್ನಪ್ಪಿದ್ದ. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್, ಕುಲದೀಪ ಸಿಂಗಾರ್, ಈತನ ಸಹೋದರ ಅಟುಲ್ ಸಿಂಗಾರ್, ಠಾಣಾ ಇನ್ಸ್ ಪೆಕ್ಟ್ ಅಶೋಕ ಸಿಂಗ್ ಭಡೌರಿಯಾ, ಸಬ್ ಇನ್ಸ್ ಪೆಕ್ಟರ್ ಕಮ್ಟಾ ಪ್ರಸಾದ, ಕಾನ್ಸ್ ಟೇಬಲ್ ಅಮೀರ ಖಾನ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕುಲದೀಪ ಸಿಂಗಾರ್ ಅಪರಾಧಿ ಎಂದು ತೀರ್ಪು ನೀಡಿದೆ. ಇತರೆ ನಾಲ್ವರನ್ನ ವಜಾ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಸಂತ್ರಸ್ತೆಯ ಮೇಲೆಯೂ ಅಟ್ಯಾಕ್ ಮಾಡಿ ಬೆಂಕಿ ಹಚ್ಚಲಾಗಿತ್ತು. ಆಕೆಯ ಆಸ್ಪತ್ರೆಯಲ್ಲಿ ಅಸುನೀಗಿದ್ಳು.




Leave a Reply

Your email address will not be published. Required fields are marked *

error: Content is protected !!