ನಾಳೆಯಿಂದ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ

342

ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ದ್ವಿತೀಯ ಪಿಯುಸಿಯ ಕೊನೆಯ ಪರೀಕ್ಷೆ ಮುಂದೂಡಲಾಗಿತ್ತು. ಇದೀಗ ಜೂನ್ 18ಕ್ಕೆ ನಿಗದಿ ಮಾಡಲಾಗಿದೆ. ಅಲ್ದೇ, ಈಗಾಗ್ಲೇ ಪರೀಕ್ಷೆ ಬರೆದಿರುವ ವಿಷಯಗಳ ಮೌಲ್ಯಮಾಪನ ನಾಳೆಯಿಂದ ಶುರುವಾಗ್ತಿದೆ.

ಆಯ್ದ ಕೇಂದ್ರಗಳಲ್ಲಿ ನಾಳೆಯಿಂದ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಹೀಗಾಗಿ ಡಿಪಿಯುಇ, ಮೌಲ್ಯಮಾಪನ ಅಧಿಕಾರಿಗಳ ಜೊತೆ ಮೇಲ್ವಿಚಾರಕರನ್ನ ಸಹ ನೇಮಕ ಮಾಡಲಾಗಿದೆ. ಹೀಗಾಗಿ ಕಳೆದ ಶನಿವಾರವೇ ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಮೈಸೂರು, ಮಂಗಳೂರು, ಬೆಂಗಳೂರು ಕೇಂದ್ರಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇನ್ನು ಒಂದು ದಿನಕ್ಕೆ ಶಿಕ್ಷಕರು 124 ಉತ್ತರ ಪತ್ರಿಕೆಗಳಿಗಿಂತಲೂ ಹೆಚ್ಚು ಮೌಲ್ಯಮಾಪನ ಮಾಡುವಂತಿಲ್ಲ. ಆಯಾ ವಿಷಯದ ಶಿಕ್ಷಕರು ತಮ್ಮ ಜಿಲ್ಲೆಯಲ್ಲಿಯೇ ಮೌಲ್ಯಮಾಪನ ಮಾಡಬಹುದು. ಅಂಕಗಳನ್ನ ಕಂಪ್ಯೂಟರ್ ನಲ್ಲಿ ದಾಖಲಿಸಬೇಕು. ಮೌಲ್ಯಮಾಪನಕ್ಕೆ ಬರುವ ಶಿಕ್ಷಕರು ಮಾಸ್ಕ್, ಸ್ಯಾನಟೈಸರ್, ನೀರಿನ ಬಾಟಲ್ ಗಳನ್ನ ಅವರೇ ತೆಗೆದುಕೊಂಡು ಬರಬೇಕು. ತಾವು ಇರುವ ಏರಿಯಾ ಕಂಟೋನ್ಮೆಂಟ್ ಆಗಿದ್ರೆ ಮೊದಲೇ ತಿಳಿಸಬೇಕು. ಹೋಂ ಕ್ವಾರಂಟೈನ್, ಕುಟುಂಬ ಸದಸ್ಯರು ಕ್ವಾರಂಟೈನ್ ನಲ್ಲಿದ್ರೆ ಅವರಿಗೆ ವಿನಾಯ್ತಿ ನೀಡಲಾಗಿದೆ. ಒಟ್ಟಿನಲ್ಲಿ ಜೂನ್ 18ಕ್ಕೆ ಇಂಗ್ಲಿಷ್ ಪರೀಕ್ಷೆಯಿದ್ದು, ಅದು ಮುಗಿಯುವುದರೊಳಗೆ ಉಳಿದ ವಿಷಯಗಳ ಮೌಲ್ಯಮಾಪನ ಮುಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ:




Leave a Reply

Your email address will not be published. Required fields are marked *

error: Content is protected !!