ಕ್ವಾರಂಟೈನ್ ನಿಯಮ ಮತ್ತೆ ಬದಲು

683

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕ್ವಾರಂಟೈನ್ ನಿಯಮವನ್ನ ಮತ್ತೆ ಬದಲು ಮಾಡಲಾಗಿದೆ. ಹೊರ ರಾಜ್ಯದಿಂದ ಬರುವವರಿಗೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ ಹೇಳಿದ್ದಾರೆ.

ಈ ಮೊದ್ಲು 14 ದಿನ ಇರುವುದನ್ನ 7 ದಿನ ಸಂಸ್ಥಾ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ಆಗಲು ಸೂಚಿಸಲಾಗಿತ್ತು. ಇದೀಗ ರಾಜ್ಯದಲ್ಲಿ ಸೋಂಕು ಹೆಚ್ಚಾಗ್ತಿರುವ ಹಿನ್ನೆಲಯಲ್ಲಿ ಮತ್ತೆ 14 ದಿನಗಳ ಕ್ವಾರಂಟೈನ್ ಗೆ ಸೂಚಿಸಲಾಗಿದೆ.

ಮನೆ ಚಿಕ್ಕದಾಗಿದ್ದು, ಜನರು ಹೆಚ್ಚಿಗೆ ಇದ್ರೆ ಸಂಸ್ಥಾ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಇದಕ್ಕಾಗಿ ಸುತ್ತಲಿನ ಕೇಂದ್ರಗಳನ್ನ ಬಳಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಇನ್ಮುಂದೆ ಮತ್ತೆ 14 ದಿನಗಳ ಕ್ವಾರಂಟೈನ್ ಅವಧಿ ನಿಗದಿ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!