ಮತ್ತೆ ಬರ್ತಾರಾ ರಾಧಾ ರಮಣ?

392

ನ್ಯೂಸ್ ಡೆಸ್ಕ್: ಕಿರುತೆರೆ ಸಮಾಚಾರ

ಈಗ ಎಲ್ಲೆಡೆ ಬಿಗ್ ಬಾಸ್ ಜ್ವರ ಶುರುವಾಗಿದೆ. ಇನ್ನು ಮೂರು ತಿಂಗಳು ಪ್ರತಿದಿನ ರಾತ್ರಿ 9 ಗಂಟೆಗೆ ಬಿಗ್ ಬಾಸ್ ಆಟ ಇರೋದ್ರಿಂದ ಅದೇ ಟೈಂಗೆ ಪ್ರಸಾರವಾಗ್ತಿದ್ದ ರಾಧಾ-ರಮಣ ಅನ್ನೋ ಸೀರಿಯಲ್ ಅಂತ್ಯವಾಗಿದೆ.

ಧಾರವಾಹಿಯಲ್ಲಿ ಸೀತಾರಾದೇವಿಯ ಮುಖವಾಡ ಕಳಚಿಬೀಳುವ ಮೂಲಕ ಎಲ್ಲರಿಗೂ ಎಲ್ಲ ಸತ್ಯ ಗೊತ್ತಾಗಿದೆ. ಆದ್ರೆ, ಆಕೆಯ ಸಾವಾಗಿ ತಿಥಿ ಮಾಡುವ ಟೈಂನಲ್ಲಿ ಟ್ವಿಸ್ಟ್ ನೀಡಲಾಗಿದೆ. ಹೀಗಾಗಿ ಧಾರವಾಹಿ ಮತ್ತೆ ಶುರುವಾಗಲಿದೆ ಅನ್ನೋ ಆಸೆಯನ್ನ ಪ್ರೇಕ್ಷಕರು ಇಟ್ಟುಕೊಂಡಿದ್ದಾರೆ. ಆದ್ರೆ, ಬದಲಾದ ಸಮಯವಾಗ್ಲಿ, ಮರಳಿ ಶುರುವಾಗುವ ಲಕ್ಷಣವಾಗ್ಲಿ ಕಾಣಸ್ತಿಲ್ಲ.

ಇನ್ನು ಬಿಗ್ ಬಾಸ್ ಜನವರಿ 25ಕ್ಕೆ ಗ್ರ್ಯಾಂಡ್ ಫಿನಾಲೆ ಕಾಣುವ ಮೂಲಕ ಎಂಡ್ ಆಗುತ್ತೆ. ಬಳಿಕ ವೀಕ್ಷಕರು ರಾಧಾ-ರಮಣ ಧಾರವಾಹಿ ಬಗ್ಗೆ ಒಲವು ಹೊಂದಿದ್ರೆ, ಚಾನಲ್ ನವರು ಅದಕ್ಕೆ ಮತ್ತೆ ಏನಾದ್ರೂ ಅವಕಾಶ ಕೊಟ್ರೆ ಮರಳಿ ಪ್ರಸಾರ ಮಾಡುವುದು ನಿರ್ದೇಶಕರ ಆಲೋಚನೆ. ಇಲ್ದೇ ಹೋದ್ರೆ ಮೂರು ವರ್ಷ ಕಂಪ್ಲೀಟ್ ಮಾಡಿರುವ ಸೀರಿಯಲ್ ದಿ ಎಂಡ್ ಆದಂತೆ.




Leave a Reply

Your email address will not be published. Required fields are marked *

error: Content is protected !!