ರಾಹುಲ್ ಗೆ ಜಾಮೀನು ಮಂಜೂರು

122

ಪ್ರಜಾಸ್ತ್ರ ಸುದ್ದಿ

ಸೂರತ್: ಮೋದಿ ಉಪನಾಮದ ವಿಚಾರವಾಗಿ ಗುಜರಾತಿನ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರಿಂದಾಗಿ ಅವರ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಇದೀಗ ಸೂರತ್ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಸೆಷನ್ಸ್ ಕೋರ್ಟ್ ನಲ್ಲಿ ಎರಡು ಅರ್ಜಿಯನ್ನು ಸಲ್ಲಿಸಲಾಗಿದೆ. ಒಂದು ಜಾಮೀನು ವಿಚಾರ, ಇನ್ನೊಂದು ಶಿಕ್ಷೆಯನ್ನು ಅಮಾನತುಗೊಳಿಸುವ ವಿಚಾರ ಕುರಿತು ಅರ್ಜಿ ಸಲ್ಲಿಸಲಾಗಿದೆ. ಇದೀಗ ಜಾಮೀನು ಮಂಜೂರಾಗಿದ್ದು, ಏಪ್ರಿಲ್ 13ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಮಾರ್ಚ್ 23ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿತು. ಜೊತೆಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತು. ಇದರ ನಡುವೆ ಸಂಸತ್ ಸ್ಪೀಕರ್ ಅವರು ರಾಹುಲ್ ಗಾಂಧಿ ಲೋಕಸಭಾ ಸದಸ್ಯಸತ್ವವನ್ನು ಅನರ್ಹಗೊಳಿಸಿದರು. ಇದು ದೇಶವ್ಯಾಪಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಚರ್ಚೆ ಹುಟ್ಟು ಹಾಕಿತು.




Leave a Reply

Your email address will not be published. Required fields are marked *

error: Content is protected !!