ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನಲ್ಲಿ ಸೋಮವಾರ ಸಂಜೆ ಮತ್ತೆ ಅಕಾಲಿಕ ಮಳೆ ಬರುತ್ತಿದೆ. ಗುಡುಗು, ಸಿಡಿಲು, ಮಿಂಚಿನೊಂದಿಗೆ ಮಳೆ ಕಾಣಿಸಿಕೊಂಡಿದೆ. ಎರಡ್ಮೂರು ದಿನ ಬಿಡುವ ನೀಡಿದ್ದ ಅಕಾಲಿಕ ಮಳೆ ಇಂದು ಮತ್ತೆ ಕಾಣಿಸಿಕೊಂಡಿದೆ.
ಬೇಸಿಗೆ ಬಿಸಿಲಿನ ಝಳದಿಂದ ಒಂದಿಷ್ಟು ತಂಪಾಗುತ್ತೆ ಎಂದು ಒಂದ್ಕಡೆ ಅನಿಸಿದರೆ ಮತ್ತೊಂದ್ಕಡೆ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಸಂಜೆ ಸುಮಾರು 7.30ರಿಂದ ಮಳೆ ಕಾಣಿಸಿಕೊಂಡಿದೆ. ರಾತ್ರಿ ಮತ್ತಷ್ಟು ಅಬ್ಬರಿಸುವ ಸಾಧ್ಯತೆಯಿದೆ. ಸಿಡಿಲಿನಿಂದ ಜಿಲ್ಲೆಯಲ್ಲಿ ಅನಾಹುತ ಸಂಭವಿಸಿವೆ. ಹೀಗಾಗಿ ಜನರಿಗೆ ಆತಂಕ ಶುರುವಾಗಿದೆ.