ಬ್ರೇಕಿಂಗ್ ನ್ಯೂಸ್
Search

ಟ್ವಿಟ್ಟರ್ ಖರೀಸಿದ ಮಸ್ಕ್

447

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಜಗತ್ತಿನ ನಂಬರ್ 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ಸೋಷಿಯಲ್ ಮೀಡಿಯಾದ ದೈತ್ಯ ಕಂಪನಿಯಾದ ಟ್ವಿಟ್ಟರ್ ನ್ನು ಖರೀದಿಸಿದ್ದಾರೆ. ಈ ಮೂಲಕ ಟ್ವಟ್ಟರ್ ನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಸುಮಾರು 44 ಬಿಲಿಯನ್ ಡಾಲರ್(3.37 ಲಕ್ಷ ಕೋಟಿ) ಗೆ ಟ್ವಿಟ್ಟರ್ ಖರೀದಿಸಿದ್ದಾರೆ. ಇದರೊಂದಿಗೆ ಪ್ರತಿ ಷೇರನ್ನು 54.20 ಡಾಲರ್ ನಂತೆ ಅಂದರೆ 4,149 ರೂಪಾಯಿಗೆ ಪಡೆದುಕೊಳ್ಳಲಾಗಿದೆ. ಟೆಸ್ಲಾ, ಸ್ಪೇಸ್ ಎಕ್ಸ್ ಅನ್ನೋ ಕಂಪನಿಯ ಮಾಲೀಕರಾದ ಮಸ್ಕ್ ಇದೀಗ ಟ್ವಿಟ್ಟರ್ ಪಡೆದುಕೊಂಡಿದ್ದಾರೆ.

ಈ ಹಿಂದೆ ಟ್ವಿಟ್ಟರ್ ಖರೀದಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ, ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. 43 ಬಿಲಿಯನ್ ಡಾಲರ್ ಗೆ ಟ್ವಿಟ್ಟರ್ ಖರೀದಿಸಲು ತಾವು ಏನೆಲ್ಲ ಮಾಡಿಕೊಂಡಿದ್ದಾರೆ ಅನ್ನೋದರ ಕುರಿತು ತಿಳಿಸಿದ ನಂತರ, ಟ್ವಿಟ್ಟರ್ ಆಡಳಿತ ಮಂಡಳಿ ಮಾತುಕತೆ ನಡೆಸಿತು. ಇದೀಗ ಮಸ್ಕ್ ಅದನ್ನು ಸಾಧಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬದಲಾವಣೆ ತರುವುದಾಗಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!