ವರ್ಮಾ ಟ್ವೀಟ್: ‘ಪವರ್ ಸ್ಟಾರ್’ಗೆ ಅವಮಾನ

300

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ರಾಮಗೋಪಾಲ ವರ್ಮಾ ಸದಾ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದು ಅವರಿಗೆ ಇಷ್ಟ ಸಹ. ವರ್ಮಾ ಮಾಡುವ ಸಿನ್ಮಾಗಳು ಕಾಂಟರ್ ವರ್ಸಿ ಮಾಡುವುದರ ಜೊತೆಗೆ ಅವರ ಟ್ವೀಟ್ ಸಹ ವಿವಾದವಾಗುತ್ತವೆ. ಆ ರೀತಿ ವರ್ಮಾ ಬರೆಯುತ್ತಾರೆ.

ಟ್ವೀಟ್ ಮಾಡಿರುವ ವರ್ಮಾ, ಪಿಕೆ, ಎಂಎಸ್, ಎನ್ ಬಿ ಹಾಗೂ ಟಿಎಸ್ ತಮ್ಮ ಚಿತ್ರದಲ್ಲಿ ನಟಿಸುತ್ತಾರೆ ಎಂದು ಬರೆದಿದ್ದಾರೆ. ಈ ರೀತಿಯಾಗಿ ಬರೆದಿದ್ದು ಬೇರೆ ಯಾರಿಗೂ ಅಲ್ಲ. ಪವರ್ ಸ್ಟಾರ್ ಪವನ ಕಲ್ಯಾಣ, ಮೆಗಾ ಸ್ಟಾರ್ ಚಿರಂಜೀವಿ, ಇವರ ಸಹೋದರ ನಾಗಬಾಬು, ನಿರ್ದೇಶಕ ತ್ರಿವಿಕ್ರಮ ಹೆಸರು ಅನ್ನೋದು ಎಲ್ಲರಿಗೂ ಗೊತ್ತು.

ಈ ಚಿತ್ರದಲ್ಲಿ ನಾಲ್ಕು ಮಕ್ಕಳು, ಎಂಟು ಎಮ್ಮೆಗಳು ಸಹ ನಟಿಸುತ್ತವೆ ಎಂದು ಹೇಳುವ ಮೂಲಕ ಪವನ ಕಲ್ಯಾಣರನ್ನ ಕೆಣಕುವ ಕೆಲಸ ಮಾಡಿದ್ದು, ಪವರ್ ಸ್ಟಾರ್ ಅಭಿಮಾನಿಗಳು ಗರಂ ಆಗಿದ್ದಾರೆ. ಹೀಗೆ ಬರೀ ವಿವಾದಾತ್ಮಕ ಟ್ವೀಟ್ ಮಾಡುತ್ತಾ, ಅವರಿವರ ಕಾಲು ಎಳೆಯುವುದು ವರ್ಮಾಗೆ ಅಭ್ಯಾಸವಾಗಿದೆ ಎಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!