‘ಹಾಸ್ಟೆಲ್ ಹುಡುಗರಿಗೆ’ ಲೀಗಲ್ ನೋಟಿಸ್ ನೀಡಿದ ರಮ್ಯ

147

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿತನ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗ್ಲೇ ಹಾಡು, ಟ್ರೇಲರ್ ನೋಡಿದ ಸಿನಿ ರಸಿಕರು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಇರುವಾಗಲೇ ನಟಿ ರಮ್ಯ ಲೀಗಲ್ ನೋಟಿಸ್ ಕಳಿಸಿದ್ದಾರೆ.

ಹೌದು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೇಲರ್ ನಲ್ಲಿ ನಟಿ ರಮ್ಯ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದರು. ಹಲವು ವರ್ಷಗಳ ಬಳಿಕ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟರು ಅಂತಾ ಸಂತಸ ವ್ಯಕ್ತಪಡಿಸಿದರು. ಆದರೆ, ಇದೆ ವಿಚಾರಕ್ಕೆ ನಟಿ ರಮ್ಯ ಚಿತ್ರ ತಂಡಕ್ಕೆ ನೋಟಿಸ್ ಕೊಟ್ಟಿದ್ದಾರೆ.

ತಮ್ಮ ಅನುಮತಿ ಇಲ್ಲದೆ ದೃಶ್ಯಗಳನ್ನು ಬಳಸಲಾಗಿದೆ. ಎಲ್ಲ ಕಡೆಯಿಂದ ಸುದ್ದಿ, ಫೋಟೋ, ಕಂಟೆಂಟ್ ತೆಗೆದು ಹಾಕಬೇಕು. ಅಲ್ಲದೇ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಲೀಗಲ್ ನೋಟಿಸ್ ಕಳಿಸಿದ್ದು, ಹಾಸ್ಟೆಲ್ ಹುಡುಗರಿಗೆ ಸಂಕಷ್ಟ ಎದುರಾಗಿದೆ.

ಈ ಚಿತ್ರ ಇದೆ ಜುಲೈ 21ರಂದು ರಿಲೀಸ್ ಆಗುತ್ತಿದೆ. ರಕ್ಷಿತ್ ಶೆಟ್ಟಿ, ದಿಗಂತ್, ಪವನ್ ಕುಮಾರ್, ರಿಷಬ್ ಶೆಟ್ಟಿ ಹಾಗೂ ರಮ್ಯ ಟ್ರೇಲರ್ ನಲ್ಲಿ ಕಾಣಿಸಿಕೊಂಡಿದ್ದು, ಕೊನೆ ಕ್ಷಣದಲ್ಲಿ ರಮ್ಯ ಅವರ ನಡೆ ಹೊಸಬರಿಗೆ ಟೆನ್ಷನ್ ಕೊಟ್ಟಿದೆ.




Leave a Reply

Your email address will not be published. Required fields are marked *

error: Content is protected !!