ಸಚಿವ ಕತ್ತಿ ವಿರುದ್ಧ ಜನಾಕ್ರೋಶ.. ರಾಜೀನಾಮೆಗೆ ಪಟ್ಟು

273

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಪಡಿತರ ಅಕ್ಕಿಯಲ್ಲಿ ಕಡಿತಗೊಳಿಸಿರುವ ಸಂಬಂಧ ರೈತರೊಬ್ಬರ ಜೊತೆ ಫೋನಿನಲ್ಲಿ ಮಾತ್ನಾಡಿರುವ ಆಹಾರ ಖಾತೆ ಸಚಿವ ಉಮೇಶ ಕತ್ತಿ, ಸಾಯಿ ಎಂದು ಹೇಳಿರುವುದು ಸಾಕಷ್ಟು ವೈರಲ್ ಆಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಉಮೇಶ ಕತ್ತಿ ರಾಜೀನಾಮೆಗೆ ಒತ್ತಾಯಿಸಲಾಗಿದೆ. ಸಾರ್ವಜನಿಕರ ಸಚಿವರ ದರ್ಪದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದ್ರಿಂದ ಎಚ್ಚೆತ್ತ ಸಿಎಂ, ಸಚಿವರ ಹೇಳಿಕೆ ವಿಷಾದನೀಯ. ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಬಳಿಕ ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ ನೀಡಿ, ತಮ್ಮ ಹೇಳಿಕೆ ಸಂಬಂಧ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದ್ರೆ, ಜವಾಬ್ದಾರಿಯುತ ಸಚಿವನಾಗಿ ಈ ರೀತಿ ಮಾತ್ನಾಡಿರುವುದು ನಿಜಕ್ಕೂ ಈ ನಾಡಿನ ದುರಂತ.

ಸಚಿವ ಕತ್ತಿ ಫೋನ್ ಸಂಭಾಷಣೆ

ರೈತ: ಎರಡು ಕೆ.ಜಿ. ಅಕ್ಕಿ ಮಾಡಿದ್ದಿರಾ ಅದು ಸಾಲುತ್ತಾ ಸಾರ್.

ಕತ್ತಿ: ಮೂರು ಕೆ.ಜಿ. ರಾಗಿ ಮಾಡಿದ್ದಿವಿ

ರೈತ: ನಮ್ಮ ಉತ್ತರ ಕರ್ನಾಟಕ ಭಾಗದವರಿಗೆ ಎಲ್ಲಿ ರಾಗಿ ಕೊಡ್ತಾ ಇದೀರಾ?

ಕತ್ತಿ: ಉತ್ತರ ಕರ್ನಾಟಕದಲ್ಲಿ ಜೋಳ ಮತ್ತು ಅಕ್ಕಿ ಮಾಡಿದ್ದಿವಿ.

ರೈತ: ಅದೇ ಸಾರ್ ಸಾಲುತ್ತಾ ಸಾರ್. ಅದು, ಲಾಕ್​ಡೌನ್​ನಲ್ಲಿ ಕೆಲಸ ಇಲ್ಲ

ಕತ್ತಿ: ಲಾಕ್​ಡೌನ್​ ಟೈಮಲ್ಲಿ ಕೇಂದ್ರ ಸರ್ಕಾರ ಪ್ರತಿ ತಿಂಗಳು ಮೇ, ಜೂನ್​ನಲ್ಲಿ 5 ಕೆ.ಜಿ. ಅಕ್ಕಿ ಕೊಡ್ತಾ ಇದೆ.

ರೈತ: ಯಾವಾಗ ಕೊಡ್ತಾ ಇದೀರಾ?

ಕತ್ತಿ: ಬರೋ ತಿಂಗಳಲ್ಲಿ

ರೈತ:ಅಲ್ಲಿಯವರೆಗೂ ಉಪವಾಸ ಇರೋದಾ ಸಾರ್. ಇಲ್ಲಾ ಸತ್ತೋಗೊದಾ

ಕತ್ತಿ: ಸತ್ತೋದ್ರೆ ಒಳ್ಳೆಯದು. ಅದಕ್ಕಿಂದ ಅಕ್ಕಿ ಮಾರೋದು ಅಲ್ಲೇ ಬಂದ್​ ಮಾಡಿಬಿಡಿ. ಇಡಿ ನಮಗೆ ಫೋನ್ ಮಾಡಬೇಡಿ




Leave a Reply

Your email address will not be published. Required fields are marked *

error: Content is protected !!