ಜಗತ್ತನ್ನು ನಿಯಂತ್ರಿಸಲು ಹುಟ್ಟಿಕೊಂಡಿದ್ದೇ ಯೋಜಿತ ಕೋವಿಡ್-19

497

ಪ್ರಜಾಸ್ತ್ರ ವಿಶೇಷ, ಮೂಲ: ಡಾ.ಜೇಮ್ಸ್ ಫೆಟ್ಜರ್

ಇವತ್ತು ಇಡೀ ಜಗತ್ತು ಕರೋನಾ ಸೋಂಕಿನಿಂದ ತತ್ತರಿಸಿ ಹೋಗಿದೆ. ಭೂಮಿ ಅನ್ನೋದು ಅಕ್ಷರಶಃ ನರಕವಾಗಿ ಮಾರ್ಪಟ್ಟಿದೆ. ಲೆಕ್ಕವಿಲ್ಲದಷ್ಟು ಸಾವು ನೋವು ಸಂಭವಿಸ್ತಿವೆ. ಬದುಕು ಎಷ್ಟೊಂದು ಭಯಾನಕವಾಗಿದೆ ಅನ್ನೋದು ಇದೊಂದು ಉದಾಹರಣೆ. ಇಷ್ಟೆಲ್ಲ ಜೀವಗಳನ್ನ ಬಲಿ ಪಡೆಯುತ್ತಿರುವ ಕೋವಿಡ್ 19 ಅನ್ನೋದು ಒಂದು ವ್ಯವಸ್ಥಿತಿವಾಗಿ ಆಯೋಜಿಸಲಾಗಿದೆ ಅನ್ನೋ ಭಯಾನಕ ಲೇಖನವೊಂದು ಸದ್ದು ಮಾಡುತ್ತಿದೆ.

ಹೌದು, ಕಳೆದ ಸೆಪ್ಟೆಂಬರ್ 30, 2020ರಲ್ಲಿ ಡಾ.ಜೇಮ್ಸ್ ಫೆಟ್ಜರ್ ಎಂಬುವರು ‘ಪ್ರೂಫ್ ದಾಟ್ ದ್ ಪ್ಯಾಂಡಮಿಕ್ ವಾಸ್ ಪ್ಲಾನ್ಡ್ ಅಂಡ್ ವಿಥ್ ಪರ್ ಪೋಸ್’ ಅನ್ನೋ ಹೆಸರಿನಲ್ಲಿ ಸುದೀರ್ಘವಾದ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ಚರ್ಚೆ ಮಾಡಿರುವ ವಿಚಾರಗಳನ್ನ ತಿಳಿದುಕೊಂಡರೆ ಇದನ್ನ ನಂಬುವುದಕ್ಕೂ ಕಷ್ಟಸಾಧ್ಯವಾಗುತ್ತೆ. ಆರಂಭದಲ್ಲಿಯೇ ಹೇಳುತ್ತಾರೆ, ಕರೋನಾ ಒಂದು ವ್ಯವಸ್ಥಿತ ನಾಟಕ. ಹಗರಣ ಹಾಗೂ ವಂಚನೆ. ಇದೊಂದು ಜಾಗತಿಕ ಅಪರಾಧ ಎಂದು.

ಪ್ರತಿ ವಾರ 5 ಲಕ್ಷ ಪತ್ರಿಕೆಗಳನ್ನ ಮಾರಾಟ ಮಾಡುವ ವೈದ್ಯಕೀಯ ತಜ್ಞರ ತಂಡವೊಂದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆಯಂತೆ. ಆಗಸ್ಟ್ 29, 2020ರಂದು ಯುರೋಪಿನಲ್ಲಿ 12 ಮಿಲಿಯನ್ ಜನರಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆಯಂತೆ. ಕರೋನಾ ವ್ಯವಸ್ಥಿತ ಸಂಚು ಎಂದು ಸ್ಪೇನ್ ನಲ್ಲಿ 600 ಜನರ ವೈದ್ಯರ ತಂಡ, ವೈದ್ಯರಿಗಾಗಿ ಸತ್ಯ ಹೆಸರಿನ ಪತ್ರಿಕಾಗೋಷ್ಠಿಯಲ್ಲಿ, ಕೋವಿಡ್ 19 ಅನ್ನೋದು ರಾಜಕೀಯ ಉದ್ದೇಶಕ್ಕಾಗಿ ಸೃಷ್ಟಿಸಲಾಗಿದೆ ಸುಳ್ಳು ಸಾಂಕ್ರಾಮಿಕ. ಇದೊಂದು ವಿಶ್ವ ಸರ್ವಾಧಿಕಾರವಾಗಿದೆ ಎಂದು ಹೇಳಿದ್ದಾರೆ. ಜರ್ಮಿನಿಯ ವೈದ್ಯರ ತಂಡ ಇದನ್ನು ಬೆಂಬಲಿಸಿದೆ. ಇನ್ನು ಅಮೆರಿಕಾದಲ್ಲಿ ತಯಾರಾದದ ‘ಪ್ಲ್ಯಾಂಡೆಮಿಕ್’ ಸಾಕ್ಷ್ಯಚಿತ್ರದಲ್ಲಿ ಕೋವಿಡ್ ಅಪರಾಧದ ಬಗ್ಗೆ ಹೇಳಲಾಗಿದ್ದು, ಅದನ್ನು 27 ಸಾವಿರ ವೈದ್ಯರು ಬೆಂಬಲಿಸಿದ್ದಾರೆ.

2015ರಲ್ಲೇ ಡಚ್ ಸರ್ಕಾರಿ ಸಂಘಟನೆಯೊಂದು ‘ಸಿಸ್ಟಮ್ ಅಂಡ್ ಮೆಥಡ್ ಫಾರ್ ಟೆಸ್ಟಿಂಗ್ ಫಾರ್ ಕೋವಿಡ್-19’ ಹಕ್ಕುಸ್ವಾಮ್ಯ ಪಡೆದಿದೆ. ಅಂದ್ರೆ, ಈ ರೋಗ ಹುಟ್ಟುವ 4 ವರ್ಷ ಮೊದ್ಲೇ ಇದರ ಪೇಟೆಂಟ್ ಪಡೆಯಲಾಗಿದೆ. ಇನ್ನೊಂದು ಭಯಾನಕ ವಿಷಯ ಅಂದ್ರೆ, 2019ರಲ್ಲಿ ಚೀನಾದಲ್ಲಿ ಕೋವಿಡ್ ಕಾಣಿಸಿಕೊಳ್ಳುವ ಮೊದ್ಲೇ, ಅಂದ್ರೆ 2017-18ರಲ್ಲೇ ಕೋವಿಡ್ 19ನ ಲಕ್ಷಾಂತರ ಕಿಟ್ ಗಳನ್ನ ವಿಶ್ವದಾದ್ಯಂತ ಮಾರಾಟ ಮಾಡಲಾಗಿದೆಯಂತೆ. ಇನ್ನು ವೈದ್ಯಕೀಯ ಪರೀಕ್ಷೆಯ ಕಿಟ್ ಗಳ ಉತ್ಪನದ ಕೋಡ್ 300215 ಆಗಿದೆ. ಅದುವೆ ಕೋವಿಡ್-19 ಟೆಸ್ಟ್ ಕಿಟ್ ಎಂದು ಹೇಳುತ್ತಾರೆ.

2025ರ ತನಕ ಕೋವಿಡ್ ಯೋಜನೆ

ಉದ್ದೇಶಿತ ಕೋವಿಡ್ ಯೋಜನೆ 2025ರ ತನಕ ಮುಂದುವರೆಸುವ ಉದ್ದೇಶವಿದೆಯಂತೆ. 2017ರಲ್ಲಿ ಆಂಥೋನಿ ಪೌಸಿ, ಟ್ರಂಪ್ ಸರ್ಕಾರಕ್ಕೆ ಸಾಂಕ್ರಾಮಿಕ ರೋಗದ ಎಚ್ಚರಿಕೆ ನೀಡಿದ್ರಂತೆ. ಈ ವೇಳೆ ನಾವು ಏನು ಮಾಡಬೇಕು ಹಾಗೂ ಏನು ಮಾಡಬಾರದು ಅನ್ನೋದನ್ನ ಸಹ ಹೇಳಿದ್ರಂತೆ. ಇನ್ನು ಖ್ಯಾತ ಉದ್ಯಮಿ ಬಿಲ್ ಗೇಟ್ಸ್ ಸಹ 2018ರಲ್ಲಿ 30 ಮಿಲಿಯನ್ ಜನರನ್ನ ಕೊಲ್ಲುವ ಸಾಂಕ್ರಾಮಿಕ ರೋಗವೊಂದು ಬರಲಿದೆ ಎಂದು ಘೋಷಿಸಿದ್ರಂತೆ. ಈ ಮೂಲಕ ಮುಂದಿನ ದಿನಗಳಲ್ಲಿ ಮಾನವೀಯತೆಯನ್ನು ಹೊಡೆದು ಹಾಕುತ್ತೆ ಎಂದು ಹೇಳಿದ್ರಂತೆ.

2013ರಲ್ಲಿ ಪ್ಯಾಂಡಮಿಕ್ ಸಾಂಗ್

ಸಂಗೀತಗಾರನೊಬ್ಬ 2013ರಲ್ಲಿ ಕರೋನಾ ರೋಗದ ಬಗ್ಗೆ ಹಾಡವೊಂದನ್ನು ಬರೆದಿದ್ದಾನೆ. ಅದರಲ್ಲಿ ಈಗಿನ ಪರಿಸ್ಥಿತಿಯ ಬಗ್ಗೆ ಸ್ಪಷ್ಟವಾದ ಸಾಹಿತ್ಯವಿದೆ. ಈ ರೋಗ ನಿಮ್ಮ ನಿಮ್ಮ ಮನೆಯ ಕಿಟಕಿಗೂ ಬರುತ್ತೆ ಎಂದು ಬರೆಯಲಾಗಿದೆಯಂತೆ. ಈ ಬಗ್ಗೆ ಆತನಿಗೆ ಕೇಳಿದ್ರೆ, 2012ರಲ್ಲಿ ಸಂಶೋಧನೆ ಮಾಡುವ ಸಂದರ್ಭದಲ್ಲಿ ‘Conspiracy Theories’(ಪಿತೂರಿಯ ಸಿದ್ಧಾಂತಗಳು) ಓದಿದಾಗ ಅದರಲ್ಲಿ 2020-30ರಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಹೇಳಲಾಗಿದ್ದು, ಅದರ ಮೇಲೆ ನಾನು ಹಾಡು ಬರೆದೆ ಎನ್ನುತ್ತಾನೆ.
ಆಂಥೋನಿ ಫೌಸಿ
ಇನ್ನು ಚೀನಾದ ವೋಹಾನ್ ನಿಂದ ಸಾಂಕ್ರಾಮಿಕ ವೈರಸ್ ಹರಡಲಿದೆ. ಅದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನ ಸಾಯಿಸಲಿದೆ ಎಂದು 2018ರಲ್ಲಿ ದ್ ಇನ್ಸ್ ಟ್ಯೂಟ್ ಫಾರ್ ಡಿಸೀಸ್ ಮಾಡಲಿಂಗ್ ಸಂಸ್ಥೆ ವಿಡಿಯೋದನ್ನ ಮಾಡಿತ್ತು. ವಿಶ್ವದ ಪ್ರಸಿದ್ಧ ತಜ್ಞರಾದ ಡಾ.ಫ್ರಾನ್ಸಿಸ್ ಬೊಯೆಲ್, ಚೀನಾದ ವುಹಾನ್ ನ ಬಯೋವೀಪನ್ ಲ್ಯಾಬ್ ನಿಂದ ವೈರಸ್ ಹುಟ್ಟು ಕೊಂಡಿದೆ ಎಂದು ಹೇಳಿದ್ದಾರೆ.
2008ರಲ್ಲಿ ಲಾಕ್ ಡೌನ್ ಬಗ್ಗೆ ಬಂದ ಪುಸ್ತಕ
ರಾಬಿನ್ ಡಿ ರುಯಿಟರ್ ಅನ್ನೋ ಲೇಖಕ ಹಾಗೂ ತನಿಖಾಧಿಕಾರಿ ಬರೆದ ಪುಸ್ತಕದಲ್ಲಿ ಜಗತ್ತಿನ ಲಾಕ್ ಡೌನ್ ಬಗ್ಗೆ ಉಲ್ಲೇಖಿಸಲಾಗಿದೆ. ಈಗ ವಿಶ್ವದಲ್ಲಿ ಏನು ನಡೆಯುತ್ತಿದೆಯೋ ಅದನ್ನು ಅವರು ಆಗ್ಲೇ ಬರೆದಿದ್ದಾರೆ. 2014ರಲ್ಲಿ ತನಿಖಾ ಪತ್ರಕರ್ತ ಹ್ಯಾರಿ ವೋಕ್ಸ್ ಸಹ ಯೋಜಿತ ಸಾಂಕ್ರಾಮಿಕ ರೋಗದ ಬಗ್ಗೆ ಹೇಳಿದ್ದಾರೆ. ಜಗತ್ತನ್ನು ನಿಯಂತ್ರಿಸುವುದು ಇದರ ಹಿಂದಿನ ಬಹುದೊಡ್ಡ ಉದ್ದೇಶ ಎಂದು ಹೇಳಿದ್ದಾರೆ.

ಹೀಗೆ ನಂಬಲು ಕಷ್ಟಸಾಧ್ಯವಾಗುವಂತಹ ಸಾಕಷ್ಟು ವಿಚಾರಗಳನ್ನ ಲೇಖಕ ಡಾ.ಜೇಮ್ಸ್ ಫೆಟ್ಜರ್ ಬರೆದಿದ್ದಾರೆ. ತುಂಬಾ ಸುದೀರ್ಘವಾದ ಲೇಖನವನ್ನ ಓದುತ್ತಾ ಹೋದಂತೆ, ಹಲವು ವಿಷಯಗಳು ಸತ್ಯವೆನಿಸುತ್ತವೆ. ಜಗತ್ತನ್ನು ನಿಯಂತ್ರಿಸಲು ಮನುಷ್ಯ ಅನಾದಿ ಕಾಲದಿಂದಲೂ ಪ್ರಯತ್ನ ಮಾಡುತ್ತಲೇ ಬರ್ತಿದ್ದಾನೆ. ಅದರಲ್ಲೂ ಚೀನಾದಂತೆ ಕಮ್ಯೂನಿಸ್ಟ್ ರಾಷ್ಟ್ರಗಳು, ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸಲು ಈ ರೀತಿ ಮಾಡುವುದಕ್ಕೆ ಸಾಧ್ಯವಿದೆ.

ಇಡೀ ಜಗತ್ತನ್ನ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಕಟ್ಟಿ ಹಾಕುವುದು. ಆ ಮೂಲಕ ಎಲ್ಲೆಡೆ ತನ್ನ ಹಿಡಿತ ಸಾಧಿಸುವುದಾಗಿದೆ. ಹೀಗಾಗಿ ಕರೋನಾ ವೈರಸ್ ಅನ್ನೋದು ಒಂದು ವ್ಯವಸ್ಥಿತಿ ಯೋಜನೆಯಾಗಿದೆ ಅನ್ನೋ ವಿಷಯದಲ್ಲಿ ಸತ್ಯ ಇರಬಹುದು ಎನಿಸುತ್ತದೆ.

ಮೂಲ ಲೇಖನದ ಲಿಂಕ್ ಇಲ್ಲಿದೆ: https://principia-scientific.com/proof-that-the-pandemic-was-planned-with-purpose/




Leave a Reply

Your email address will not be published. Required fields are marked *

error: Content is protected !!