ರವಿ ಬೋಪಣ್ಣ ಈ ಚಿತ್ರದ ರಿಮೇಕ್!

380

ನಟ, ನಿರ್ದೇಶಕ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ನಟನೆಯ ರವಿ ಬೋಪಣ್ಣ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಸ್ಪೆನ್ಸ್ ಕಥೆಯನ್ನ ಹೊಂದಿರುವಂತೆ ಟೀಸರ್ ಹೇಳ್ತಿದೆ. ಹೀಗಾಗಿ ಈ ಮೂವಿ ಒಂದಿಷ್ಟು ನಿರೀಕ್ಷೆಗಳನ್ನ ಮೂಡಿಸಿದೆ.

ನಟ ರವಿಚಂದ್ರನ್ ನಟನೆಯ ಜೊತೆಗೆ ಆಕ್ಷನ್ ಕಟ್ ಹೇಳ್ತಿರುವುದ್ರಿಂದ ಸಹಜವಾಗಿ ಕುತೂಹಲ ಮೂಡುವಂತೆ ಮಾಡುತ್ತೆ. ಅವರ ಫಸ್ಟ್ ಲುಕ್ ನೋಡಿದ ಅಭಿಮಾನಿಗಳಿಗೆ ಏನೋ ಹೊಸದು ಕೊಡಲು ಹೊರಟಿದ್ದಾರೆ ಅಂತಾ ಕನ್ಫರ್ಮ್ ಆಗಿದೆ. ಅಷ್ಟಕ್ಕೂ ಈ ಸಿನಿಮಾ ಮಲೆಯಾಳಂ ಚಿತ್ರದ ರಿಮೇಕ್ ಎನ್ನಲಾಗ್ತಿದೆ.

ಕಳೆದ ವರ್ಷ ಮಳೆಯಾಂನಲ್ಲಿ ಹಿಟ್ ಸಿನಿಮಾ ಎನಿಸಿಕೊಂಡ ಜೋಸೆಫ್ ರಿಮೇಕ್ ಆಗಿದೆ ಅನ್ನೋದು ಗಾಂಧಿ ನಗರದ ಮಾತು. ಅಂಗದಾನ ಮಾಫಿಯಾದ ಕುರಿತ ಕಥೆಯನ್ನ ಇದು ಹೊಂದಿದೆ. ಆದ್ರೆ, ಚಿತ್ರದ ಟ್ಯಾಗ್ ಲೈನ್ ಕೆಳಗೆ ದೃಶ್ಯ-2 ಅಂತಾ ಹೇಳಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ. ಕಿಚ್ಚ ಸುದೀಪ ಇದರಲ್ಲಿ ಲಾಯರ್ ಪಾತ್ರ ಮಾಡಿದ್ದಾರೆ. ಮಾಣಿಕ್ಯ ಸಿನಿಮಾದ ಬಳಿಕ ರವಿಚಂದ್ರನ್ ಹಾಗೂ ಸುದೀಪ ಮತ್ತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!