ಸುದೀಪ್ ವಿರುದ್ಧ ಧರಣಿ: ರವಿಚಂದ್ರನ್ ಎಂಟ್ರಿ

216

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ಮಾಪಕ ಕುಮಾರ್, ನಟ ಸುದೀಪ್ ವಿರುದ್ಧ ಫಿಲ್ಮ್ ಚೇಂಬರ್ ಎದುರು ಧರಣಿ ನಡೆಸಿದ್ದಾರೆ. ಸುದೀಪ್ ತಮ್ಮಿಂದ ಹಣ ಪಡೆದು ಸಿನಿಮಾ ಮಾಡುತ್ತಿಲ್ಲವೆಂದು ಆರೋಪಿಸಿದ್ದರು. ಇದರ ವಿರುದ್ಧ ನಟ ಸುದೀಪ್ ಕೋರ್ಟ್ ಮೆಟ್ಟಿಲು ಏರಿದರು. ಇದನ್ನು ಖಂಡಿಸಿ ನಿರ್ಮಾಪಕ ಕುಮಾರ್ ಧರಣಿ ನಡೆಸಿದರು. ಇವರಿಗೆ ಕೆಲ ನಿರ್ಮಾಪಕರು ಸಾಥ್ ನೀಡಿದ್ದಾರೆ.

ಮಂಗಳವಾರವೂ ಧರಣಿ ಮುಂದುವರೆಯಿತು. ಇದನ್ನು ಬಗೆಹರಿಸಲು ನಟ ಶಿವರಾಜಕುಮಾರ್ ಅಥವ ನಟ ರವಿಚಂದ್ರನ್ ಬರಬೇಕು ಅನ್ನೋ ಮನವಿಯಾಗಿತ್ತು. ಹೀಗಾಗಿ ನಟ, ನಿರ್ದೇಶಕ, ನಿರ್ಮಾಪಕ ರವಿಚಂದ್ರನ್, ಧರಣಿ ಕುಳಿತವರನ್ನು ಕರೆದಿರು. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಶೂಟಿಂಗ್ ನಡೆದಿದ್ದು, ಅಲ್ಲಿಗೆ ನಿರ್ಮಾಪಕರ ತಂಡ ಹೋಯಿತು.

ಇಲ್ಲಿ ಒಂದು ಸುತ್ತಿನ ಸಭೆ ನಡೆದಿದೆ. ಸಭೆ ಬಹುತೇಕ ಸಕ್ಸಸ್ ಆದಂತಿದೆ. ಎಲ್ಲರೂ ನಗುತ್ತಲೇ ಆಚೆ ಬಂದು ಮಾತನಾಡಿದರು. ಸುದೀಪ್ ಗೆ ತುಂಬಾ ನೋವಾಗಿದೆ. ಅದು ಎಷ್ಟರ ಮಟ್ಟಿಗೆ ಅನ್ನೋದು ಗೊತ್ತಿಲ್ಲ. ಎಲ್ಲರೂ ಪರಿಚಯದವರೆ. ನಾನು ದಾಖಲೆ ಪರಿಶೀಲನೆ ಮಾಡುತ್ತೇನೆ. ಆನಂತರ ಸುದೀಪಗೆ ಮಾತಾಡಬೇಕಾ, ಬೇಡವಾ ತೀರ್ಮಾನ ಮಾಡುತ್ತೇವೆ. ನಾನಂತೂ ಲೀಡರ್ ಆಗಲ್ಲ. ಆದರೆ ಎಲ್ಲರಿಗೂ ವಿಲನ್ ಆಗುತ್ತೇನೆ. ಶಿವಣ್ಣನೇ ಲೀಡರ್. ಅಣ್ಣಾವ್ರ ಮನೆಯೇ ಹೆಡ್ ಆಫೀಸ್. ಮೊದಲು ಅಲ್ಲಿಗೆ ಹೋಗಿ ಇಲ್ಲಿಗೆ ಬನ್ನಿ ಅಂತಾ ನಾನೇ ಹೇಳಿದ್ದೇನೆ ಎಂದು ರವಿಚಂದ್ರನ್ ಹೇಳಿದರು.




Leave a Reply

Your email address will not be published. Required fields are marked *

error: Content is protected !!