ಪರದೇಶದ ರಿಷಿ ಸುನಕ್ ಪೂರ್ವಜರೆಲ್ಲ ಬೇರೆ ಬೇರೆ ದೇಶದವರು!

397

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಆಗಿರುವ ರಿಷಿ ಸುನಕ್ ಮೂಲದ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ. ಯುಕೆಯ ಸೌತಂಪ್ಟನ್ ನಲ್ಲಿ ಜನಿಸಿದವರು. ತಂದೆ ಕೀನ್ಯಾದಲ್ಲಿ ಜನಿಸಿದರೆ ತಾಯಿ ತಾಂಜೇನಿಯಾದಲ್ಲಿ ಜನಿಸಿದವರು. ಹೀಗಾಗಿ ಸಂಪೂರ್ಣವಾಗಿ ಪರದೇಶಿಯರಾದರೂ ರಿಷಿ ಸುನಕ್ ಪ್ರಧಾನಿಯಾಗಿರುವುದಕ್ಕೆ ಭಾರತದಲ್ಲಿ ಕೆಲವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಆಗಿದ್ದಕ್ಕೆ ಕೆಲ ಭಾರತೀಯರು ಖುಷಿ ಪಡುತ್ತಿರುವುದಕ್ಕೆ ಕಾರಣ, ಕರ್ನಾಟಕದ ಉದ್ಯಮಿ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿಯ ಮಗಳು ಅಕ್ಷತಾ ಮೂರ್ತಿ ಅವರನ್ನು ಮದುವೆಯಾಗಿರುವುದ್ದಕ್ಕೆ. ಇದು ಇದೀಗ ಮತ್ತೊಂದು ರೀತಿಯ ರಾಜಕೀಯ ಸ್ವರೂಪ ಪಡೆದಿದೆ.

ರಿಷಿ ಸುನಕ್ ಅವರ ಪೂರ್ವಜರ ಹಿನ್ನೆಲೆ ಸ್ಪಷ್ಟವಾಗಿಲ್ಲ. ಸುನಕ್ ಈಗಿನ ಪಾಕಿಸ್ತಾನದ ಗುರ್ಜನ್ವಾಲಾ ಪಂಜಾಬಿ ಖಾತ್ರಿ ಕುಟುಂಬದವರು. ರಿಷಿ ಅಜ್ಜ ರಾಮದಾಸ್ ಸುನಕ್ ನೈರೋಬಿಯಾದಲ್ಲಿ ಕ್ಲರ್ಕ್ ಆಗಲು 1935ರಲ್ಲಿ ಗುರ್ಜನ್ವಾಲಾ ತೊರೆದರು. ರಾಮದಾಸ್ ಪತ್ನಿ ಸುಹಾಗ್ ರಾಣಿ ಸುನಕ್ ಕೀನ್ಯಾಗೆ ತೆರಳುವುದಕ್ಕೂ ಮೊದಲು ದೆಹಲಿಗೆ ತೆರೆಳಿದ್ದರು. ಬ್ರಿಟಿಷ್ ಆಳ್ವಿಕೆ ಕಾಲದ ಪೂರ್ವ ಪಂಜಾಬ್ ಈಗ ಪಾಕಿಸ್ತಾನದಲ್ಲಿದೆ. ರಿಷಿ ಸುನಕ್ ಹುಟ್ಟು, ಓದು, ರಾಜಕೀಯ, ಜೀವನಶೈಲಿ ಪ್ರತಿಯೊಂದು ಪರದೇಶದ್ದು. ಕ್ಯಾಲಿಫೋರ್ನಿಯಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾದಲ್ಲಿ ಓದುತ್ತಿದ್ದಾಗ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಪರಿಚಯ. ಮುಂದೆ 2009ರಲ್ಲಿ ಮದುವೆಯಾದರು. ಇಬ್ಬರು ಹೆಣ್ಮಕ್ಕಳು ಇದ್ದಾರೆ.

ಭಾರತೀಯನೆ ಅಲ್ಲದ ರಿಷಿ ಸುನಕ್ ಬಗ್ಗೆ ಸಂತಸ ವ್ಯಕ್ತಪಡಿಸುವವರು, ಭಾರತಕ್ಕಾಗಿ ಹೋರಾಡಿದ ಕುಟುಂಬದ ಹಾಗೂ ಅಜ್ಜಿ, ತಾಯಿ ಪ್ರಧಾನಿಯಾದವರು. ಸ್ವತಃ ಪ್ರಧಾನಿಯಾದ ರಾಜೀವ್ ಗಾಂಧಿ ಅವರು ಸೋನಿಯಾ(ಆಂಟೋನಿಯಾ ಮೈನೊ) ಅವರನ್ನು ಮದುವೆಯಾದರು. ಇಬ್ಬರು ಮಕ್ಕಳಿಗೆ ಜನ್ಮ ನೀಡಿದರು. ಈ ದೇಶದ ಸೊಸೆಯಾಗಿ ಇಲ್ಲಿಯ ಪೌರತ್ವ ಪಡೆದರು. ಭಾರತೀಯರಾಗಿಯೇ ಜೀವಿಸುತ್ತಿರುವವರು. ಈ ದೇಶಕ್ಕಾಗಿ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಟ್ಟವರು. ಆದರೆ, ಅವರು ಪ್ರಧಾನಿಯಾಗುವ ಹೊತ್ತಿನಲ್ಲಿ ಇಟಲಿಯವಳು ಎಂದು ಅವಮಾನಿಸಿದರು. ಈಗಲೂ ಅವಮಾನಿಸುತ್ತಿರುವವರು, ಪರದೇಶದ ಪ್ರಜೆಯನ್ನು ಅಪ್ಪಿಕೊಳ್ಳುತ್ತಿರುವರ ವಿರುದ್ಧ ವಿರೋಧ ವ್ಯಕ್ತವಾಗುವ ಮೂಲಕ ಮತ್ತೊಂದು ರೀತಿಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!